Asianet Suvarna News Asianet Suvarna News

‘ಡಿಸಿಎಂ ಹುದ್ದೆ ಕೊಡದೆ ವಾಲ್ಮೀಕಿ ಸಮುದಾಯಕ್ಕೆ ಬಿಜೆಪಿ ಮೋಸ ’

Aug 27, 2019, 12:02 PM IST

ಬೆಂಗಳೂರು (ಆ.27): ಮೈತ್ರಿ ಸರ್ಕಾರವನ್ನು ಕೆಡವಿ, ಹೊಸ ಸರ್ಕಾರ ರಚಿಸುವ ವೇಳೆ ಎಲ್ಲವೂ ಸರಿಯಾಗಿದ್ದ ಬಿಜೆಪಿಯಲ್ಲಿ, ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ವೇಳೆ ಭಿನ್ನಮತ ಭುಗಿಲೆದ್ದಿದೆ. ಚುನಾವಣೆ ವೇಳೆ ಡಿಸಿಎಂ ಎಂದೇ ಬಿಂಬಿಸಲಾಗಿದ್ದ ಶ್ರೀರಾಮುಲುಗೆ ಆರೋಗ್ಯ ಖಾತೆ ನೀಡಿ ನಾಯಕರು ಕೈತೊಳೆದುಕೊಂಡಿದ್ದಾರೆ. ಸಹಜವಾಗಿ, ನಾಯಕರ ಈ ಕ್ರಮ ವಾಲ್ಮೀಕಿ ಸಮುದಾಯವನ್ನು ಕೆರಳಿಸಿದೆ. ಶ್ರೀರಾಮುಲುರನ್ನು ಯಾಕೆ ಡಿಸಿಎಂ ಮಾಡಿಲ್ಲ ಎಂದು ಜನ ಪ್ರಶ್ನಿಸುತ್ತಿದ್ದಾರೆ.