ಬೆಂಗಳೂರು ಪೊಲೀಸ್ ಪೇದೆಗೆ ಕೊರೋನಾ ಲಕ್ಷಣ ಇಲ್ಲದಿದ್ರೂ ಟೆಸ್ಟ್‌ನಲ್ಲಿ ಪಾಸಿಟಿವ್..!

ಬೆಂಗಳೂರಿನ ಸಿಟಿ ಮಾರ್ಕೆಟ್ ಪೊಲೀಸ್ ಕಾನ್ಸ್‌ಟೇಬಲ್‌ಗೆ ಕೊರೋನಾ ಸೋಂಕಿರುವುದು ಖಚಿತವಾಗಿದೆ. ಟಿಪ್ಪು ನಗರದಲ್ಲಿ ಪೊಲೀಸ್ ಪೇದೆ ಕರ್ತವ್ಯ ನಿರ್ವಹಿಸಿದ್ದರು. ಕೊರೋನಾ ಸೋಂಕಿನ ಲಕ್ಷಣಗಳು ಯಾವುವು ಇವರಿಗೆ ಇರಲಿಲ್ಲ, ಆದರೆ ಪರೀಕ್ಷೆ ನಡೆಸಿದಾಗ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಜೂ.09): ಕೊರೋನಾ ವಾರಿಯರ್ಸ್‌ಗಳಾದ ಪೊಲೀಸರಿಗೆ ಹೆಮ್ಮಾರಿಯ ಕಾಟ ತಪ್ಪಿಲ್ಲ. ಈಗೀಗಂತೂ ದಿನಕ್ಕೊಬ್ಬ ಪೊಲೀಸರ ಮೇಲೆ ಕೊರೋನಾ ಸೋಂಕು ಅಟ್ಯಾಕ್ ಮಾಡುತ್ತಿದೆ.

ಸಿಟಿ ಮಾರ್ಕೆಟ್ ಪೊಲೀಸ್ ಕಾನ್ಸ್‌ಟೇಬಲ್‌ಗೆ ಕೊರೋನಾ ಸೋಂಕಿರುವುದು ಖಚಿತವಾಗಿದೆ. ಟಿಪ್ಪು ನಗರದಲ್ಲಿ ಪೊಲೀಸ್ ಪೇದೆ ಕರ್ತವ್ಯ ನಿರ್ವಹಿಸಿದ್ದರು. ಕೊರೋನಾ ಸೋಂಕಿನ ಲಕ್ಷಣಗಳು ಯಾವುವು ಇವರಿಗೆ ಇರಲಿಲ್ಲ, ಆದರೆ ಪರೀಕ್ಷೆ ನಡೆಸಿದಾಗ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ.

ಚಾಮರಾಜಪೇಟೆಯ 50 ವರ್ಷದ ವ್ಯಕ್ತಿ ಕೊರೊನಾದಿಂದ ಸಾವು?

ತರಬೇತಿ ಮುಗಿಸಿ ಕರ್ತವ್ಯಕ್ಕೆ ಹಾಜರಾಗಿದ್ದ ಪೊಲೀಸ್‌ಗೆ ಸೋಂಕು ತಗಲಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಇದೀಗ ಸೋಂಕಿತನ ಸಂಪರ್ಕದಲ್ಲಿದ್ದ 8 ಮಂದಿ ಸಿಬ್ಬಂದಿಯನ್ನು ಇದೀಗ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Related Video