Sonu Nigam: ಜೇನುದನಿ.. ಮನಸು ವಿಷ.. ಕನ್ನಡದ ಮೇಲೆ ಯಾಕೆ ಇಷ್ಟು ದ್ವೇಷ?

ಸೋನು ನಿಗಮ್.. ಈ ಹೆಸರು ಕೇಳ್ತಾನೇ ಅವರ ಜೇನುದನಿಯ ಹಾಡುಗಳು ನೆನಪಿಗೆ ಬರುತ್ವೆ. ಅದ್ರಲ್ಲೂ ಕನ್ನಡದಲ್ಲಿ ಸೋನು ಹಾಡಿರೋ ನೂರಾರು ಚೆಂದದ ಹಾಡುಗಳಿವೆ. ಕನ್ನಡಿಗರಿಗೆ ಸೋನು ಅಂದ್ರೆ ತುಸು ಹೆಚ್ಚೇ ಪ್ರೀತಿ. ಆದ್ರೆ ಇಂಥಾ ಸೋನು ನಿಗಮ್ ಈಗ ಕನ್ನಡದ ಬಗ್ಗೆ ಉದ್ದಟತನದಿಂದ ಮಾತನಾಡಿದ್ದಾರೆ. 

Share this Video
  • FB
  • Linkdin
  • Whatsapp

ಕನ್ನಡ ಹಾಡನ್ನ ಹಾಡು ಎಂದ ಕನ್ನಡಿಗನನ್ನ ಉಗ್ರಗಾಮಿಗೆ ಹೋಲಿಕೆ ಮಾಡಿದ್ದಾರೆ. ಇಷ್ಟು ದಿನ ಹೊತ್ತು ಮೆರೆಸಿದ ಕನ್ನಡಿಗರೇ ಈಗ ಸೋನುಗೆ ಛೀಮಾರಿ ಹಾಕ್ತಾ ಇದ್ದಾರೆ. ಯೆಸ್ ಅವರು ಜೇನದನಿಯ ಗಾಯಕ.. ಸೋನು ಬಾಯಿತೆರೆದ್ರೆ ಸುಶ್ರಾವ್ಯ ಸಂಗೀತ ಕೇಳುತ್ತೆ. ಅವರ ಸಿಹಿದನಿಗೆ ಕೇಳುಗರ ಮನಸು ಆನಂದಲ್ಲಿ ತೇಲುತ್ತೆ. ಅದ್ರಲ್ಲೂ ಸೋನು ಧ್ವನಿಯಲ್ಲಿ ಕನ್ನಡ ಹಾಡುಗಳನ್ನ ಕೇಳೋದೇ ಒಂದು ಚೆಂದ. ಅಂತೆಯೇ ಉಳಿದೆಲ್ಲಾ ಭಾಷಿಕರಿಗಿಂತ ಸೋನುನ ಕನ್ನಡಿಗರು ಹೊತ್ತು ಮೆರೆಸಿದ್ದೇ ಹೆಚ್ಚು. ಆದ್ರೆ ಇಂಥಾ ಸೋನು ಈಗ ಕನ್ನಡಿಗರ ಮೇಲೆ ವಿಷ ಕಾರಿದ್ದಾರೆ. ಹೌದು ಇತ್ತೀಚಿಗೆ ಬೆಂಗಳೂರಿನ ಖಾಸಗಿ ಕಾಲೇಜ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋನು ಭಾಗಿಯಾಗಿದ್ರು. ಬೇರೆ ಬೇರೆ ಭಾಷೆಯ ಹಾಡುಗಳನ್ನ ಸೋನು ಹಾಡಿದ್ದಾರೆ. ಆಗ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹೇಳುವಂತೆ ಒತ್ತಾಯಿಸಿದ್ದಾನೆ. ಹಾಡನ್ನ ಅರ್ಧಕ್ಕೆ ನಿಲ್ಲಿಸಿದ ಸೋನು ನಿಗಮ್ , ‘ಕನ್ನಡ.. ಕನ್ನಡ..’ ಇದೇ ಕಾರಣದಿಂದ ಪಹಲ್ಗಾಮ್ ದಾಳಿಯಾಗಿದ್ದು’ ಅಂದುಬಿಟ್ಟಿದ್ದಾರೆ.

Related Video