ಅರಣ್ಯದಲ್ಲಿ ನಟಿ ಹುಟ್ಟುಹಬ್ಬ; ಗಾರ್ಡ್‌ಗಳಿಗೆ ಸ್ಪೆಶಲ್ ಉಡುಗೊರೆ!

  • ಪ್ರಾಣವನ್ನು ಕೈಲೀ ಹಿಡಿದು ಓಡಾಡುವ ವಾಚರ್‌ಗಳೇ  ಅರಣ್ಯ ಇಲಾಖೆಯ ಬೆನ್ನೆಲುಬು
  • ಅರಣ್ಯ ಇಲಾಖೆ ಗಾರ್ಡ್‌ಗಳ ಜೊತೆ ನಟಿ-ನಿರ್ದೇಶಕಿ ಶೃತಿ ನಾಯ್ಡು ಹುಟ್ಟುಹಬ್ಬ
  • ಸುವರ್ಣನ್ಯೂಸ್- ಕನ್ನಡಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನದ ಸಹ-ರಾಯಬಾರಿ ಶೃತಿ ನಾಯ್ಡು
First Published Dec 5, 2019, 5:26 PM IST | Last Updated Dec 5, 2019, 5:26 PM IST

ಬಂಡೀಪುರ (ಡಿ.05): ಕಾಲುನಡಿಗೆಯಲ್ಲೇ ದಟ್ಟ ಅರಣ್ಯದೊಳಗೆ ರೌಂಡ್ಸ್  ಹೊಡೆದು, ವನ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಲು ತಮ್ಮ ಪ್ರಾಣವನ್ನು ಕೈಲೀ ಹಿಡಿದು ಓಡಾಡುವ ವಾಚರ್‌ಗಳೇ ಅರಣ್ಯ ಇಲಾಖೆಯ ಬೆನ್ನೆಲುಬು ಆಗಿದ್ದಾರೆ.

ಇವರ ಅವಿರತ ಶ್ರಮದಿಂದಾಗಿಯೇ ಅರಣ್ಯಗಳು  ಉಳಿದಿವೆಯೆಂದರೆ ತಪ್ಪಾಗಲಾರದು. ಸುವರ್ಣನ್ಯೂಸ್- ಕನ್ನಡಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನದ ಸಹ-ರಾಯಬಾರಿ ನಟಿ-ನಿರ್ದೇಶಕಿ ಶೃತಿ ನಾಯ್ಡು ತಮ್ಮ ಹುಟ್ಟುಹಬ್ವನ್ನು ಅರಣ್ಯ ಕಾವಲುಗಾರರೊಂದಿಗೆ ವಿಶಿಷ್ಟವಾಗಿ ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಆ ಕಾವಲುಗಾರರಿಗೆ ವಿಶೇಷವಾದ ಉಡುಗೊರೆಯನ್ನು ನೀಡಿದರು. ಇಲ್ಲಿದೆ ಮತ್ತಷ್ಟು ಮಾಹಿತಿ....