ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನ ಪುಂಡಾಟ ಕೇಸ್, ಮಗನನ್ನು ಬಂಧಿಸದಂತೆ ಖಾಕಿ ಮೇಲೆ ಒತ್ತಡ.?
ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನ ಪುಂಡಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಗನ ರಕ್ಷಣೆಗೆ ಖಾಕಿ ಮೇಲೆ ಒತ್ತಡ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರು (ಅ. 25): ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadesh) ಪುತ್ರನ ಪುಂಡಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಗನ ರಕ್ಷಣೆಗೆ ಖಾಕಿ ಮೇಲೆ ಒತ್ತಡ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮಹಿಳೆಯರ ಮೇಲೆ ಹಲ್ಲೆ ಆರೋಪ: ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನ ವಿರುದ್ಧ FIR
ಒಂದೆಡೆ ಸ್ನೇಹಿತ್ ಗ್ಯಾಂಗ್ ಬಂಧಿಸದಂತೆ ಖಾಕಿ ಮೇಲೆ ಒತ್ತಡ, ಇನ್ನೊಂದೆಡೆ ದೂರುದಾರರಿಗೆ ರಾಜಿಯಾಗುವಂತೆ ಸ್ಯಾಂಡಲ್‌ವುಡ್ ದೊಡ್ಡ ನಿರ್ಮಾಪಕರಿಂದ ಕರೆ ಹೋಗಿದೆ ಎನ್ನಲಾಗುತ್ತಿದೆ. ಮನೆ ಕೆಲಸದ ಮಹಿಳೆಯರ ಮೇಲೆ ಸ್ನೇಹಿತ್ ಹಾಗೂ ಅವರ ತಂಡ ಹಲ್ಲೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಆ ಮಹಿಳೆಯರಿಗೆ ದೊಡ್ಡ ನಿರ್ಮಾಪಕ ಕರೆ ಮಾಡಿ ಸಂಧಾನಕ್ಕೆ ಕೇಳಿಕೊಂಡಿದ್ಧಾರೆ. ಹಲ್ಲೆಯಾಗಿ 2 ದಿನವಾದ್ರೂ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ.