ಸೋತು ಕೂತಿದ್ದ ಮಗನಿಗೆ ಕಿಚ್ಚು ತುಂಬಿದ್ದ ಮದರ್ ಇಂಡಿಯಾ!

ಇದು ಸುದೀಪ್ ತಾಯಿ ಸರೋಜ ಇಂಟ್ರಸ್ಟಿಂಗ್ ವಿಚಾರ. ಸೋತು ಕೂತಿದ್ದ ಮಗನಿಗೆ ಕಿಚ್ಚು ತುಂಬಿದ್ದವರೇ ಇವರು. ಇದೇ ಕಾರಣಕ್ಕೆ, ಪ್ರೀತಿಯ ಅಮ್ಮನನ್ನು ಕಳೆದುಕೊಂಡ ಕಿಚ್ಚ ಸುದೀಪ ಕುಗ್ಗಿ ಹೋಗಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಅ.21): ಕರುನಾಡಿಗೆ ಸುದೀಪ್ ಕಿಚ್ಚ ಇರಬಹುದು. ಆದ್ರೆ, ಆ ಜೀವದ ಎದರು ಅವರು ಕಂದ. ರಾಜ್ಯಕ್ಕೆ ಸುದೀಪ್ ಅಭಿನಯ ಚಕ್ರವರ್ತಿ ಇರಬಹುದು. ಆದ್ರೆ, ಆ ಜೀವಕ್ಕೆ ಸುದೀಪ್ ಇನ್ನೂ ಕೂಡ ಪುಟ್ಟ ಮಗು.


ಆ ಜೀವ ಇನ್ನಿಲ್ಲ. ಸುದೀಪ್ ಅವರ ತಾಯಿ ಅಸುನೀಗಿದ್ದಾರೆ. ಬೆಟ್ಟದಷ್ಟು ನೆನಪುಗಳನ್ನ ಕಿಚ್ಚನ ಬಾಳಲ್ಲಿ ಉಳಿಸಿ ಹೋಗಿದ್ದಾರೆ. ಆ ತಾಯಿ – ಮಗನ ನೆನೆಪಿನ ದೋಣಿಯಲ್ಲಿ ನಾವು ಕೂಡ ಸಾಗಿ ಬರೋಣ.

ಪ್ಯಾಟೆ ಮಂದಿ ಕಾಡಿಗ್ ಬಂದ್ರು ಶೋ ನೋಡಿ ಅಕುಲ್ 'ಬಿಗ್ ಬಾಸ್' ನಡೆಸ್ಬಹುದೆಂದ ನೆಟ್ಟಿಗರು!

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬಾರದ ಲೋಕಕ್ಕೆ ಹೋಗಿದ್ದಾರೆ. ಸುದೀಪ್ ಮನಸ್ಸು ಭಾರವಾಗಿದೆ. ಸರೋಜಾ ಅವರ ಅಂತಿಮ ದರ್ಶನ ಪಡೆಯೋಕೆ ವಿವಿಧ ಕ್ಷೇತ್ರದ ಗಣ್ಯರು ಸುದೀಪ್ ಮನೆಗೆ ಆಗಮಿಸಿದ್ದರು. ಸಾವಿಗೆ ಸಂತಾಪ ಸೂಚಿಸಿ, ಸುದೀಪ್ ಅವರಿಗೆ ಸಮಾಧಾನ ಹೇಳಿದ್ದರು.

Related Video