ಅಕುಲ್ 'ಬಿಗ್ ಬಾಸ್' ನಡೆಸಿಕೊಡ್ಲಿ ಅಂದ್ರು ನೆಟ್ಟಿಗರು; ಪ್ಯಾಟೆ ಮಂದಿ ಕಾಡಿಗ್ ಬಂದ್ರು ವಿಡಿಯೋ ಎಫೆಕ್ಟ್!
'ನಾನಿನ್ನು ಬಿಗ್ ಬಾಸ್ ನಿರೂಪಣೆ ಮಾಡೋದಿಲ್ಲ, ಇದೇ ಕೊನೆಯ ಸೀಸನ್..' ಎಂದಿದ್ದಾರೆ ಕಿಚ್ಚ ಸುದೀಪ್. ಹಾಗಿದ್ದರೆ ಮುಂದೆ ಯಾರು ಬಿಗ್ ಬಾಸ್ ಶೋ ಹೋಸ್ಟ್ ಆಗಬಹುದು, ಕಲರ್ಸ್ ಕನ್ನಡ ಚಾನೆಲ್ ಯಾರಿಗೆ ಮಣೆ ಹಾಕಬಹುದು..
ಸೋಷಿಯಲ್ ಮೀಡಿಯಾನೇ ಹಾಗೆ! ಅಲ್ಲಿ ಯಾವಾಗ ಯಾವ ವಿಡಿಯೋ, ಯಾವ ಫೋಟೋ ವೈರಲ್ ಆಗುತ್ತದೆ ಎಂದು ಹೇಳಲಾಗದು. ಯಾವುದರ ಬಗ್ಗೆ ಚರ್ಚೆ ಆಗುತ್ತದೆ ಎಂದೂ ಹೇಳಲಾಗದು. ಇದೀಗ ಹಳೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಅದು ಅಕುಲ್ ಬಾಲಾಜಿ (Akul Balaji) ಶೋಗೆ ಸಂಬಂಧಿಸಿದ್ದು. ಅಕುಲ್ ಬಾಲಾಜಿ ಬಗ್ಗೆ ಈಗ ಯಾಕೆ ಮಾತಾಡ್ತಾ ಇದಾರೆ, ಏನ್ ಮಾತಾಡ್ತಾ ಇದಾರೆ ಅನ್ನೋದಕ್ಕೆ ಉತ್ತರ ಇಲ್ಲಿದೆ ನೋಡಿ..
ಹೌದು, ಸದ್ಯ ಬಿಗ್ ಬಾಸ್ ಹೋಸ್ಟ್ ಸುದೀಪ್ (Kichcha Sudeep) ಅವರು 'ನಾನಿನ್ನು ಬಿಗ್ ಬಾಸ್ ನಿರೂಪಣೆ ಮಾಡೋದಿಲ್ಲ, ಇದೇ ಕೊನೆಯ ಸೀಸನ್..' ಎಂದಿದ್ದಾರೆ. ಆ ಬಳಿಕ, ಹಾಗಿದ್ದರೆ ಮುಂದೆ ಯಾರು ಬಿಗ್ ಬಾಸ್ ಶೋ ಹೋಸ್ಟ್ ಆಗಬಹುದು, ಕಲರ್ಸ್ ಕನ್ನಡ ಚಾನೆಲ್ ಯಾರಿಗೆ ಮಣೆ ಹಾಕಬಹುದು ಎಂಬ ಚರ್ಚೆ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಸೌಂಡ್ ಮಾಡುತ್ತಿತ್ತು. ಇದೀಗ, ಅಕುಲ್ ಬಾಲಾಜಿ ನಡೆಸಿಕೊಡುತ್ತಿದ್ದ 'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ಶೋದ ಹಳೆಯ ವಿಡಿಯೋವನ್ನು ಪೋಸ್ಟ್ ಮಾಡಿ, ಬಿಗ್ ಬಾಸ್ ಶೋನ ಮುಂದಿನ ಸೀಸನ್ ಇವರೇ ನಡೆಸಬಹುದು ಎನ್ನಲಾಗುತ್ತಿದೆ.
ಹೊಸಬರ ಜೊತೆ ನಿವೇದಿತಾ ಗೌಡ ರೊಮ್ಯಾನ್ಸ್, ರಸಿಕರ ರಾಣಿಯಾಗಲು ಹೊರಟ 'ರೀಲ್ಸ್ ರಾಣಿ'!
ಹೌದು, ಸದ್ಯ ಅಕುಲ್ ಬಾಲಾಜಿ (pyate mandi kadige bandru) ಅವರು ಬಿಗ್ ಬಾಸ್ ನಡೆಸಿಕೊಡುವುದು ಸೂಕ್ತ ಎನ್ನಲಾಗುತ್ತಿದೆ. ಇದು ನೆಟ್ಟಿಗರ ಅನಿಸಕೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯಾಗಲೀ ಅಥವಾ ನಟ-ನಿರೂಪಕ ಅಕುಲ್ ಬಾಲಾಜಿ ಆಗಲೀ ಯಾವುದೇ ಸ್ಟೇಟ್‌ಮೆಂಟ್ ಕೊಟ್ಟಿಲ್ಲ. ಈಗಿನ್ನು 11ನೇ ಸೀಸನ್ ಶುರುವಾಗಿ ಮಧ್ಯಂತರಕ್ಕೂ ಕಾಲಿಟ್ಟಿಲ್ಲ. ಈಗಲೇ ಆ ಬಗ್ಗೆ ಬಿಗ್ ಬಾಸ್ ಟೀಮ್ ಏನೂ ಹೇಳಲಿಕ್ಕಿಲ್ಲ.
ಆದರೆ, ಬಿಗ್ ಬಾಸ್ ಪ್ರಿಯ ವೀಕ್ಷಕರಿಗೆ ಈ ಬಾರಿ ಹೇಗೂ ಸುದೀಪ್ ಇದ್ದಾರೆ, ಮುಂದಿನ ಬಾರಿ ಯಾರಾಗಬಹುದು ಎಂಬ ಕುತೂಹಲವೇ ಜಾಸ್ತಿ ಸೃಷ್ಟಿಯಾಗಿದೆ. ಹೀಗಾಗಿ ಈಗ ಈ ಬಗ್ಗೆ ಚರ್ಚೆ ಆಗುತ್ತಿದೆ ಅಷ್ಟೇ! ಒಟ್ಟಿನಲ್ಲಿ, ಸದ್ಯ ನಡೆಯುತ್ತಿರುವ ಬಿಗ್ ಬಾಸ್ ಶೋ ಲಾಯರ್ ಜಗದೀಶ್ ಹಾಗೂ ರಂಜಿತ್ ಜಗಳದ ಮೂಲಕ ಸಖತ್ ಕ್ರೇಜ್ ಪಡೆದುಕೊಂಡಿತ್ತು. ಆದರೆ, ಅವರಿಬ್ಬರೂ 'ಮ್ಯಾನ್ ಹ್ಯಾಂಡಲಿಂಗ್' ಗಲಾಟೆ ಮೂಲಕ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಾಗಿದೆ. ಈಗ ರಸಿಗಮಪ ಖ್ಯಾತಿಯ ಹಾವೇರಿ ಹನುಮಂತ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ.
ಏಷ್ಯಾನೆಟ್ ಸುವರ್ಣಗೆ ರಂಜಿತ್ ಎಕ್ಸ್‌ಕ್ಲೂಸಿವ್ ಮಾತು: ನನಗಾದ ನಷ್ಟ ಯಾರು ಕೊಡ್ತಾರೆ?
ಮುಗ್ಧ ಸ್ವಭಾವದ ಬಡಪಾಯಿ ಗಾಯಕ ಹನುಮಂತ ಆ ಮನೆಯಲ್ಲಿ ಅದೆಷ್ಟು ದಿನ ಇರುತ್ತಾರೆ, ಅಲ್ಲಿರುವ ಘಟಾನುಘಟಿಗಳೊಂದಿಗೆ ಅದು ಹೇಗೆ ಹೋರಾಡುತ್ತಾರೆ ಎಂಬುದೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇದರ ಜೊತೆ ಈಗ, ಮುಂದಿನ ಬಿಗ್ ಬಾಸ್ ಸೀಸನ್ 12ಗೆ ಅಕುಲ್ ಬಾಲಾಜಿ ಬಂದರೆ ಚೆನ್ನ ಎನ್ನುವ ಮಾತು ಸುತ್ತಾಡತೊಡಗಿದೆ. ನಿಜವಾಗಿ ಹೇಳಬೇಕು ಎಂದರೆ, 'ಏನ್ರೀ ಮೀಡಿಯಾ..' ಅನ್ನೋ ಬದಲು, 'ಏನ್ರೀ ಸೋಷಿಯಲ್ ಮೀಡಿಯಾ..' ಅನ್ನೋದೇ ಬೆಸ್ಟ್..! ಏನಂತೀರಾ?