ಡೊನಾಲ್ಡ್ ಟ್ರಂಪ್ ಹೋಟೆಲ್​ ಮುಂದೆ ಕಾರ್ ಬಾಂಬ್ ಸ್ಫೋಟ

ಟ್ರಕ್ ದಾಳಿ ಹಿಂದೆ ಐಸಿಸ್ ಉಗ್ರ ಸಂಘಟನೆಯ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ನ್ಯೂ ಓರ್ಲಿಯನ್ಸ್​ ದಾಳಿ ಟ್ರಕ್​ನಲ್ಲಿ ಐಸಿಸ್ ಧ್ವಜ ಪತ್ತೆಯಾಗಿದೆ. ಟ್ರಕ್​ನಲ್ಲಿದ್ದ ಸ್ಫೋಟಕಗಳು, ಗನ್ ಅನ್ನು ಎಫ್​ಬಿಐ ವಶಕ್ಕೆ ಪಡೆದಿದೆ.

First Published Jan 3, 2025, 12:21 PM IST | Last Updated Jan 3, 2025, 12:21 PM IST

ಬೆಂಗಳೂರು(ಜ.03):  ಹೊಸ ವರ್ಷದ ಸಂಭ್ರಮದಲ್ಲಿದ್ದ ಅಮೆರಿಕದಲ್ಲಿ 3 ಸರಣಿ ಭಯೋತ್ಪಾದಕ ದಾಳಿಗಳು ನಡೆದಿವೆ. ಒಂದರ ಮೇಲೊಂದರಂತೆ ಮೂರು ಘಟನೆಗಳಿಂದ ಅಮೆರಿಕ ಜನತೆ ತತ್ತರಿಸಿದ್ದಾರೆ. ಒಂದೇ ದಿನ ಟ್ರಕ್ ದಾಳಿ, ಕಾರ್ ಸ್ಫೋಟ, ಗುಂಡಿನ ದಾಳಿಗಳು ನಡೆದಿವೆ. ಡೊನಾಲ್ಡ್ ಟ್ರಂಪ್ ಹೋಟೆಲ್​ ಮುಂದೆ ಕಾರ್ ಬಾಂಬ್ ಸ್ಫೋಟಗೊಂಡಿದೆ. ಲಾಸ್​ವೆಗಾಸ್​ನ ಟ್ರಂಪ್ ಹೋಟೆಲ್​ ಮುಂದೆ ಟೆಸ್ಲಾ ಕಾರ್ ಸ್ಫೋಟಗೊಂಡಿದೆ. ಟ್ರಕ್ ದಾಳಿಗೂ, ಕಾರ್ ಬಾಂಬ್ ಸ್ಫೋಟಕ್ಕೂ ಸಂಬಂಧ ಇರೋ ಶಂಕೆ ವ್ಯಕ್ತವಾಗಿದೆ. 

23 ವರ್ಷದ ನಂತರ ಅಮೆರಿಕದಲ್ಲಿ ಭೀಕರ ಭಯೋತ್ಪಾದಕ ದಾಳಿ

ಅಮೆರಿಕದ ಲೂಸಿಯಾನ ರಾಜ್ಯದ ನ್ಯೂ ಓರ್ಲಿಯನ್ಸ್​ನಲ್ಲಿ ಟ್ರಕ್ ದಾಳಿ ನಡೆದಿದೆ.  ಬೌರ್ಬನ್​​ ರಸ್ತೆಯಲ್ಲಿ ಸಂಭ್ರಮಿಸುತ್ತಿದ್ದ ಜನರ ಮೇಲೆ ಟ್ರಕ್ ದಾಳಿ ನಡೆದಿದ್ದು ರಸ್ತೆ ಮಧ್ಯೆ ಸಂಭ್ರಮಿಸುತ್ತಿದ್ದವರ ಮೇಲೆ ಟ್ರಕ್ ನುಗ್ಗಿದೆ. ಟ್ರಕ್​​ ಬಂದ ಸ್ಪೀಡ್​ಗೆ 15 ಜನರು ಸಾವನ್ನಪ್ಪಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಟ್ರಕ್​ನಲ್ಲಿ ಐಸಿಸ್ ಉಗ್ರ ಸಂಘಟನೆಯ ಧ್ವಜ ಪತ್ತೆಯಾಗಿದೆ. ಇದು ಭಯೋತ್ಪಾದಕ ಕೃತ್ಯ ಎಂದು ಎಫ್​ಬಿಐ ಟೀಂ ತನಿಖೆಗೆ ಇಳಿದಿದೆ. 

ಟ್ರಕ್ ದಾಳಿ ಹಿಂದೆ ಐಸಿಸ್ ಉಗ್ರ ಸಂಘಟನೆಯ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ನ್ಯೂ ಓರ್ಲಿಯನ್ಸ್​ ದಾಳಿ ಟ್ರಕ್​ನಲ್ಲಿ ಐಸಿಸ್ ಧ್ವಜ ಪತ್ತೆಯಾಗಿದೆ. ಟ್ರಕ್​ನಲ್ಲಿದ್ದ ಸ್ಫೋಟಕಗಳು, ಗನ್ ಅನ್ನು ಎಫ್​ಬಿಐ ವಶಕ್ಕೆ ಪಡೆದಿದೆ.