ಸಾಮಾನ್ಯರಂತೆ ಪತ್ನಿಯೊಂದಿಗೆ ಮಾರ್ಕೆಟ್ ಗೆ ಹೋಗಿ ಹಣ್ಣು-ತರಕಾರಿ ಕೊಂಡ ಮಹಾರಾಜ

ಮೈಸೂರು ಮಹಾರಾಜ ಯದುವೀರ್ ಒಡೆಯರ್  ಮತ್ತು ತ್ರಿಷಿಕಾ ದಂಪತಿ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಸಾಮಾನ್ಯರಂತೆ ಹಣ್ಣು-ಹಂಪಲು ಖರೀದಿ ಮಾಡಿದ್ದಾರೆ. ಮೈಸೂರು ಪಾಕ್, ನಂಜನಗೂಡು ಬಾಳೆಹಣ್ಣು , ಸೊಪ್ಪು ಹಾಗೂ ಮಾವಿನ ಹಣ್ಣು ಖರೀದಿ ಮಾಡಿದ್ದಾರೆ. ಮಹಾರಾಜ ದಂಪತಿ ಭೇಟಿ ವ್ಯಾಪಾರಿಗಳಿಗೆ ಒಂದು ಕ್ಷಣ ಅಚ್ಚರಿ ತಂದಿತು. ಕೆಲವರು ಮಹಾರಾಜರ ಆಶೀರ್ವಾದ ಪಡೆದುಕೊಂಡರು. ಪಾರಂಪರಿಕ ದೇವರಾಜ ಮಾರುಕಟ್ಟೆ ಕೆಡವಬೇಕು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ, ಹೈಕೋರ್ಟ್ ಆದೇಶವನ್ನು ಹಲವರು ತಪ್ಪಾಗಿ ಭಾವಿಸಿರುವುದೇ ಇಂಥ ಸುದ್ದಿ ಹರಡಲು ಕಾರಣ. ಪಾರಂಪರಿಕ ಮಾರುಕಟ್ಟೆಯನ್ನು ಕಾಪಾಡಲು ಬದ್ಧನಿದ್ದೇನೆ ಎಂದು ಯದುವೀರ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿಯೂ ತಿಳಿಸಿದ್ದಾರೆ.

Share this Video
  • FB
  • Linkdin
  • Whatsapp

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video