Punganur Cow: ಜಗತ್ತಿನ ಸ್ಪುರದ್ರೂಪಿ ಹಸು ಪುಂಗನೂರಿನ ಪುಟಾಣಿಗಳನ್ನು ನೋಡಿದ್ದೀರಾ?
ಜಗತ್ತಲ್ಲೇ ಅತಿ ಕುಳ್ಳ, ಆದರೆ, ಅಷ್ಟೇ ಸ್ಪುರದ್ರೂಪಿಯಾದ ಹಸುವಿನ ತಳಿ ಪುಂಗನೂರು. ಈ ಮುದ್ದು ಹಸುಗಳ ಕುರಿತ ವಿವರ ಮಾಹಿತಿ ಇಲ್ಲಿದೆ.
ಬೆಳೆಯೋದು ಎರಡೇ ಅಡಿ, ಅದರೆ ದಷ್ಟಪುಷ್ಟವಾಗಿ ಮೈ ಕೈ ತುಂಬಿಕೊಂಡು ಬಾಲ ನೆಲಕ್ಕೆ ತಾಕಿಸುತ್ತಾ ಓಡಾಡುವ ಈ ಸ್ಪುರದ್ರೂಪಿ ಹಸುವನ್ನು ಒಮ್ಮೆ ನೋಡಿದರೆ ಮತ್ತೊಮ್ಮೆ, ಮತ್ತೊಮ್ಮೆ ನೋಡಿದರೆ ಮಗದೊಮ್ಮೆ ನೋಡಬೇಕೆನಿಸುತ್ತದೆ. ಈ ಮುದ್ದು ಪುಟಾಣಿಗಳ ಅಂದ ಹಾಗೂ ಗಾತ್ರ ನೋಡಿದ್ರೆ ಅವನ್ನು ಕೊಟ್ಟಿಗೆಯಲ್ಲಿಡೋಲ್ಲ, ಬದಲಿಗೆ ಮನೆಯೊಳಗೇ ಸಾಕೋಕೆ ಮನಸ್ಸು ಮಾಡ್ತೀರಿ.
ಹೌದು, ಆಂಧ್ರದ ಚಿತ್ತೂರು ಜಿಲ್ಲೆಯ ಪುಂಗನೂರು ಎಂಬ ಹಳ್ಳಿ ಮೂಲದ ಪುಂಗನೂರು ಹಸು ಜಗತ್ತಿನ ಅತಿ ಸುಂದರ ಹಸು ಎಂಬ ಪ್ರಶಂಸೆಗೆ ಪಾತ್ರವಾಗಿದೆ. ಇದರ ಹಾಲು ಅಮೃತ ಸಮಾನ ಎಂದು ಶಿವನೇ ಮೆಚ್ಚಿ ಕೊಂಡಾಡಿದ್ದನಂತೆ. ಇನ್ನು ತಿರುಪತಿ ತಿಮ್ಮಪ್ಪನಿಗೂ ಪ್ರತಿದಿನ ನೈವೇದ್ಯಕ್ಕೆ ಬಳಸುವ ಹಾಲು ಪುಂಗನೂರು ತಳಿಯ ಹಸುವಿನದ್ದೇ. ಪುರಾಣದಲ್ಲಿ ಕಾಮಧೇನು ಎಂದು ಕರೆದಿರುವುದೂ ಈ ತಳಿಯ ಹಸುಗಳನ್ನೇ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಈ ಹಸುವಿನ ಹಾಲು ಲೀಟರ್‌ಗೆ 250 ರುಪಾಯಿಯಂತೆ ಮಾರಾಟವಾಗುತ್ತದೆ.
ಪ್ರಣಯವಿಲ್ಲದ Co-Parenting ಜೀವನ ಹೇಗಿರುತ್ತೆ ಗೊತ್ತಾ?
ಈ ತಳಿಯ ಹಸುಗಳು ಹೈನುಗೈರಿಕೆಗೂ ಸೈ, ಹುಡಿಮಣ್ಣ ಭೂಮಿಯಲ್ಲಿ ಕೆಲಸಕ್ಕೂ ಸೈ. ಆದರೆ ಇತ್ತೀಚೆಗೆ ಪುಂಗನೂರು ತಳಿಯ ಹಸುಗಳು ಬಹಳ ಅಪರೂಪವಾಗಿವೆ. ಆಂಧ್ರಪ್ರದೇಶದ ಕೆಲ ಜಿಲ್ಲೆಗಳನ್ನು ಹೊರತುಪಡಿಸಿದರೆ ನಮ್ಮ ಕರಾವಳಿ ಭಾಗದಲ್ಲಿ ಎಲ್ಲೋ ಕೆಲ ಬೆರಳೆಣಿಕೆಯಷ್ಟನ್ನು ಕಾಣಬಹುದು. ಈ ಪುಂಗನೂರು ಕಾಮಧೇನುವಿನ ಕುರಿತು ಹೆಚ್ಚಿನ ವಿವರಗಳಿಗಾಗಿ ವಿಡಿಯೋ ವೀಕ್ಷಿಸಿ.