Sofia Jirau : ಡೌನ್ ಸಿಂಡ್ರೋಮ್ ನಡುವೆಯೂ 'ವಿಕ್ಟೋರಿಯಾಸ್ ಸೀಕ್ರೆಟ್‌' ಸಂಸ್ಥೆಯ ಪ್ರಖ್ಯಾತ ಮಾಡೆಲ್

ಡೌನ್ ಸಿಡ್ರೋಮ್ ಹೊಂದಿರುವ ಮಾಡೆಲ್ ಸೋಫಿಯಾ
ಐಷಾರಾಮಿ ಒಳ ಉಡುಪು ಬ್ರ್ಯಾಂಡ್ 'ವಿಕ್ಟೋರಿಯಾಸ್ ಸೀಕ್ರೆಟ್‌"
ವಿಕ್ಟೋರಿಯಾ ಸೀಕ್ರೆಟ್ ನ ರಹಸ್ಯ ರೂಪದರ್ಶಿ ಸೋಫಿಯಾ ಜಿರಾವ್

First Published Feb 18, 2022, 7:27 PM IST | Last Updated Feb 18, 2022, 7:27 PM IST

ಬೆಂಗಳೂರು (ಫೆ.18): ಫ್ಯಾಶನ್ ಜಗತ್ತಿನಲ್ಲಿ ವಿಕ್ಟೋರಿಯಾ ಸೀಕ್ರೆಟ್ (Victoria Secret)  ಎನ್ನುವ ಬ್ರ್ಯಾಂಡ್ ಯಾರಿಗೆ ಗೊತ್ತಿಲ್ಲ ಹೇಳಿ. ಸಾಕಷ್ಟು ಮಾಡೆಲ್ ಗಳು ಈ ಬ್ರ್ಯಾಂಡ್ ನಿಂದ  ಗುರುತಿಸಿಕೊಳ್ಳುತ್ತಾರೆ. ಇಂಥ ಪ್ರಖ್ಯಾತ ಬ್ರ್ಯಾಂಡ್ ನಲ್ಲಿ ಡೌನ್ ಸಿಡ್ರೋಮ್ (Downs Syndrome) ಹೊಂದಿದ್ದ ಮಾಡೆಲ್ ಒಬ್ಬರು ಇದ್ದರು ಎಂದರೆ ಅಚ್ಚರಿಯಾಗದೇ ಇರದು. ಐಷಾರಾಮಿ ಒಳ ಉಡುಪು ಬ್ರ್ಯಾಂಡ್ 'ವಿಕ್ಟೋರಿಯಾಸ್ ಸೀಕ್ರೆಟ್‌ನ'  ರೂಪದರ್ಶಿ ಸೋಫಿಯಾ ಜಿರಾವ್ (Sofia Jirau) ಅವರ ಸ್ಟೋರಿ ಇದು.

ಮಾಡೆಲಿಂಗ್ ಜಗತ್ತಿನಲ್ಲಿ ಇತಿಹಾಸ ನಿರ್ಮಿಸಿರುವ ಪೋರ್ಟೋರಿಕೋ (Puerto Rico) ದೇಶದ ರೂಪದರ್ಶಿ ಸೋಫಿಯಾ ಜಿರಾವ್ ಗೆ ಡೌನ್ ಸಿಂಡ್ರೋಮ್ ಹೊಂದಿದ್ದರು. 'ನಾನು ಅಂದು ಕಂಡ ಕನಸು ಈಗ ನನಸಾಗಿದೆ' ಎಂದು ಹೇಳ್ತಾರೆ ಸೋಫಿಯಾ ಜಿರಾವ್, ಅಭಿಯಾನದಲ್ಲಿ ಇತರೆ 17 ಮಂದಿ ಮಾಡೆಲ್ ಗಳ ಜೊತೆ ಸೋಫಿಯಾ ಕಾಣಿಸಿಕೊಂಡಿದ್ದಾರೆ. ಡೌನ್ ಸಿಂಡ್ರೋಮ್ ಇರುವ ವ್ಯಕ್ತಿಗಳನ್ನೇ ಇದೇ ಮೊದಲ ಬಾರಿಗೆ ಕಂಪನಿ ರೂಪದರ್ಶಿಯರನ್ನಾಗಿ ಆಯ್ಕೆ ಮಾಡುವ ಮೂಲಕ ಸಾಹಸ ಮಾಡಿದೆ.

Fashion Week : 40  ಸೂಪರ್‌ ಮಾಡೆಲ್‌ಗಳು ಒಂದೇ ವೇದಿಕೆಯಲ್ಲಿ... ಜೆಕೆ, ಶ್ವೇತಾ ರಂಗು!
2019ರಲ್ಲಿ ಮೊದಲ ಬಾರಿಗೆ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟ ಸೋಫಿಯಾ ಜಿರಾವ್, ಅಂದಿನಿಂದ ಇಲ್ಲಿಯವರೆಗೂ ಹಲವು ಪ್ರಖ್ಯಾತ ವಿನ್ಯಾಸಗಾರರ ಉಡುಪುಗಳಿಗೆ ರೂಪದರ್ಶಿಯಾಗಿ ಕೆಲಸ ಮಾಡಿದ್ದಾರೆ. 2019ರಲ್ಲಿ ಸೋಫಿಯಾ 'ಅಲವೆಟ್ಟೆ' (Alavett) ಎಂಬ ಬಟ್ಟೆ ಮತ್ತು ಆಕ್ಸೆಸರೀಸ್ ಲೈನ್ ಪ್ರಾರಂಭಿಸಿದ್ದಾರೆ. ಅದರೊಂದಿಗೆ ಪೋರ್ಟೊರಿಕೊದ ಕಂಪೆನಿ INprendeದ ರಾಯಭಾರಿಯಾಗಿಯೂ ಕೆಲಸ ಮಾಡಿದ್ದಾರೆ. ಅಮೆರಿಕದ ಖ್ಯಾತ ಗಾಯಕಿ ಜೆನ್ನಿಫರ್ ಲೋಪೆಜ್, ಸೋಫಿಯಾರ ಫ್ಯಾಶನ್ ಐಕಾನ್ ವಿಕ್ಟೋರಿಯಾಸ್ ಸೀಕ್ರೆಟ್ ಬ್ರ್ಯಾಂಡಿಂಗ್ ನಂತರ ಫ್ಯಾಶನ್ ಜಗತ್ತಿನಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿದ್ದಾರೆ.

Video Top Stories