ಗ್ಯಾಸ್ ಗೀಸರ್ ಸೈಲಂಟ್ ಕಿಲ್ಲರ್.. ಮುನ್ನೆಚ್ಚರಿಕೆ ಕ್ರಮ ಏನೇನು?
* ಮಹಾಲಕ್ಷ್ಮೀ ಲೇಔಟ್ ನ ಮನೆಯ ಸ್ನಾನದ ಕೋಣೆಯಲ್ಲಿ ಕುಸಿದು ಬಿದ್ದಿದ್ದ ಸಂಪದ
* 2 ಗಂಟೆ ಕಳೆದರೂ ಸ್ನಾನದ ಮನೆಯಿಂದ ಹೊರಬಾರದ ವಿದ್ಯಾರ್ಥಿನಿ
* ಗಾಬರಿಗೊಂಡ ಕುಟುಂಬದವರು ಡೋರ್ ಮುರಿದು ನೋಡಿದ ಬಳಿಕ ಕುಸಿದು ಬಿದ್ದಿದ್ದ ಸಂಪದ
* ಹಾಗಾದರೆ ಗ್ಯಾಸ್ ಗೀಸರ್ ಎಷ್ಟು ಅಪಾಯಕಾರಿ?
ಬೆಂಗಳೂರು(ಸೆ. 08) ನೀವು ಮನೆಯಲ್ಲಿ ಗ್ಯಾಸ್ ಗೀಸರ್ ಬಳಸುತ್ತೀರಾ? ಹಾಗಾದರೆ ಈ ವಿವರಣೆಯನ್ನು ನೋಡಲೇಬೇಕು. ಗ್ಯಾಸ್ ಗೀಸರ್ ಸೈಲೆಂಟ್ ಕಿಲ್ಲರ್. ಸ್ನಾನಕ್ಕೆಂದು ಹೋದ ಎಂಬಿಬಿಎಸ್ ವಿದ್ಯಾರ್ಥಿನಿಯನ್ನು ಗ್ಯಾಸ್ ಗೀಸರ್ ಬಲಿ ಪಡೆದಿದೆ.
ವಿದ್ಯಾರ್ಥಿನಿ ಜೀವ ಬಲಿಪಡೆದ ಗ್ಯಾಸ್ ಗೀಸರ್
ಗ್ಯಾಸ್ ಗೀಸರ್ ಉಸಿರುಗಟ್ಟಿ ಎಂಬಿಬಿಎಸ್ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ. ಸಂಪದ (23) ವರ್ಷದ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ದುರಂತ ಸಾವಿಗೀಡಾಗಿದ್ದಾರೆ.
ಸೆಪ್ಟೆಂಬರ್ 4 ರ ಮಧ್ಯಾಹ್ನ 12:30 ರ ವೇಳೆಗೆ ಸ್ನಾನಕ್ಕೆಂದು ತೆರಳಿದ್ದ ವಿದ್ಯಾರ್ಥಿನಿ ತೆರಳಿದ್ದರು. ಈ ವೇಳೆ ಕಾರ್ಬನ್ ಮೋನಾಕ್ಸೈಡ್ ಲೀಕ್ ಆಗಿ ಉಸಿರುಗಟ್ಟಿ ಸಾವು ಕಂಡಿದ್ದಾರೆ ಮಹಾಲಕ್ಷ್ಮೀ ಲೇಔಟ್ ನ ಮನೆಯ ಸ್ನಾನದ ಕೋಣೆಯಲ್ಲಿ ಕುಸಿದು ಬಿದ್ದಿದ್ದ ಸಂಪದ ಅಲ್ಲೇ ಸಾವು ಕಂಡಿದ್ದಾರೆ. ಹಾಗಾದರೆ ಏನೆಲ್ಲ ಎಚ್ಚರಿಕೆ ಪಾಲಿಸಿಬೇಕು?