ಆಜಾದಿ ಕಾ ಅಮೃತ ಮಹೋತ್ಸವ್: ವಿಜಯಪುರದಲ್ಲಿ ಯುವಜನ ಸಂಕಲ್ಪ ನಡಿಗೆ
Azadi Ka Amrit Mahotsav: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಪುತ್ರ ಭರತಗೌಡರಿಂದ ಯುವಜನ ಸಂಕಲ್ಪ ನಡಿಗೆ ಶುರುವಾಗಿದೆ
ವಿಜಯಪುರ (ಆ. 05): ಆಜಾದಿ ಕಾ ಅಮೃತಮಹೋತ್ಸವ ಹಿನ್ನೆಲೆ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಪುತ್ರ ಭರತಗೌಡರಿಂದ ಯುವಜನ ಸಂಕಲ್ಪ ನಡಿಗೆ ಶುರುವಾಗಿದೆ. ಆಲಮಟ್ಟಿಯಿಂದ ತಾಳಿಕೋಟೆ ವರೆಗೆ 75 ಕಿಲೋ ಮೀಟರ್ ನಡಿಗೆ ಕಾರ್ಯಕ್ರಮ ಇದಾಗಿದ್ದು, ಸಾವಿರಾರು ವಿದ್ಯಾರ್ಥಿಗಳು, ಮಾಜಿ ಸೈನಿಕರು, ಶಿಕ್ಷಕರು, ಸರ್ಕಾರಿ ನೌಕರರು, ಯುವಕರು, ಜನಪ್ರತಿನಿಧಿಗಳು ಭಾಗಿಯಾಗಿದ್ದಾರೆ.
ಆಲಮಟ್ಟಿಯ ಹರ್ಡೇಕರ ಮಂಜಪ್ಪ ಸ್ಮಾರಕ ಭವನದಿಂದ ಯುವಜನ ಸಂಕಲ್ಪ ನಡಿಗೆಗೆ ಚಾಲನೆ ಸಿಕ್ಕಿದೆ. ಯುವಜನ ಸಂಕಲ್ಪ ನಡಿಗೆಗೆ ಶ್ರೀಗಳು ಚಾಲನೆ ನೀಡಿದ್ದು, ಇಂದಿನಿಂದ ಆಲಮಟ್ಟಿಯಿಂದ ತಾಳಿಕೋಟೆ ವರೆಗೆ 75 ಕೀ.ಮಿ 8 ದಿನಗಳ ನಡಿಗೆ ಇರಲಿದೆ. ಆಲಮಟ್ಟಿ, ಹುಲ್ಲೂರು ಗೆದ್ದಲಮರಿ, ಮುದ್ದೇಬಿಹಾಳ, ನಾಲ್ವತವಾಡ, ಮಿಣಜಗಿ ಮೂಲಕ ನಡಿಗೆ ತಾಳಿಕೋಟೆ ತಲುಪಲಿದೆ.
ಸ್ವತಂತ್ರ್ಯ ಹೋರಾಟಗಾರರ ಜನ್ಮಭೂಮಿ ವಿಜಯಪುರದ ಚಡಚಣ
ಇಡೀ ಸಂಕಲ್ಪ ನಡಿಗೆಯ ನೇತೃತ್ವವನ್ನು ನಡಹಳ್ಳಿ ಪುತ್ರ ಯುವ ಉದ್ಯಮಿ ಭರತಗೌಡ ಪಾಟೀಲ್ ವಹಿಸಿದ್ದಾರೆ. ಆಗಸ್ಟ್ 12ರಂದು ಯುವಜನ ಸಂಕಲ್ಪ ನಡಿಗೆ ತಾಳಿಕೋಟೆ ತಲುಪಲಿದೆ. ಈಗಾಗಲೇ ನಡಿಗೆಗಾಗಿ 25 ಸಾವಿರ ಯುವಕ, ಯುವತಿಯರಿಂದ ಆನ್ ಲೈನ್ ಕ್ಯೂ ಆರ್ ಕೋಡ್ ಮೂಲಕ ರಿಜಿಸ್ಟ್ರೇಷನ್ ಮಾಡಿಕೊಂಡಿದ್ದಾರೆ.
ಯುವಕರಲ್ಲಿ ದೇಶ ಭಕ್ತಿಯ ಕಿಚ್ಚು ಹೆಚ್ಚಿಸೋದಕ್ಕೆ ಈ ಯುವಜನ ಸಂಕಲ್ಪ ನಡಿಗೆ ಎಂದು ನಡಹಳ್ಳಿ ಪುತ್ರ ಭರತಗೌಡ ಎ ಪಾಟೀಲ್ ಹೇಳಿದ್ದಾರೆ. ಯುವ ಜನರು ಯುವ ಜನ ಸಂಕಲ್ಪ ನಡಿಗೆಯಲ್ಲಿ ಹೆಚ್ಚೆಚ್ಚು ಭಾಗವಹಿಸಬೇಕು ಎಂದು ಶಾಸಕ ನಡಹಳ್ಳಿ ಕರೆ ನೀಡಿದ್ದಾರೆ.