ಬೆಂಗಳೂರು: ಮಳೆಯಲ್ಲಿ ಬೈಕ್ ಸ್ಕಿಡ್, ಯುವಕ ಸಾವು, ಮತ್ತೋರ್ವನ ಸ್ಥಿತಿ ಗಂಭೀರ

*  ಬೆಂಗಳೂರಿನ ಕಾರ್ಪೋರೇಷನ್‌ನ ಪವಿತ್ರ ಟಾಕೀಸ್‌ ಬಳಿ ನಡೆದ ಘಟನೆ
*  ವೇಗವಾಗಿ ಬರುತ್ತಿದ್ದ ಟಿಪ್ಪರ್‌ ಲಾರಿಗೆ ಸಿಲುಕಿದ ಯುವಕರು
*  ಈ ಸಂಬಂಧ ವಿಲ್ಸನ್‌ ಗಾರ್ಡನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು 
 

Share this Video
  • FB
  • Linkdin
  • Whatsapp

ಬೆಂಗಳೂರು(ಏ.19): ಬೆಂಗಳೂರಿನಲ್ಲಿ ಮಳೆಯ ಅರ್ಭಟಕ್ಕೆ ಯುವಕನೊನ್ನ ಮೃತಪಟ್ಟ ಘಟನೆ ನಿನ್ನೆ(ಸೋಮವಾರ) ನಡೆದಿದೆ. ಭಾರೀ ಮಳೆ ಸುರಿದ ಪರಿಣಾಮ ಬೈಕ್‌ ಸ್ಕಿಡ್‌ ಆದ ಪರಿಣಾಮ ಘಟನೆ ಕಾರ್ಪೋರೇಷನ್‌ನ ಪವಿತ್ರ ಟಾಕೀಸ್‌ ಬಳಿ ಸಂಭವಿಸಿದೆ. ಘಟನೆಯಲ್ಲಿ ಮತ್ತೋರ್ವ ಯುವಕನಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಗೊಂಡ ಯುವಕನನ್ನ ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಳೆಯ ಅವಾಂತರದಿಂದ ಯುವಕ ಬಲಿಯಾಗಿದ್ದಾರೆ. ವೇಗವಾಗಿ ಬರುತ್ತಿದ್ದ ಟಿಪ್ಪರ್‌ ಲಾರಿಗೆ ಸಿಲುಕಿದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿ, ಮತ್ತೋರ್ವ ಯುವಕ ಗಾಯಗೊಂಡಿದ್ದಾನೆ. ಈ ಸಂಬಂಧ ವಿಲ್ಸನ್‌ ಗಾರ್ಡನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Karnataka Cabinet Expansion: ಸಂಪುಟ ಪುನಾರಚನೆಗೆ ಹೈಕಮಾಂಡ್‌ ಅಸ್ತು: ಬೊಮ್ಮಾಯಿಗೆ ನಡ್ಡಾ ಬುಲಾವ್

Related Video