ಮಲೆನಾಡಿಗೆ ಪ್ರತಿದಿನ ಉಗಿಬಂಡಿ, ಶಿವಮೊಗ್ಗ-ಯಶವಂತಪುರ ಚುಕು-ಬುಕು ಸ್ಟಾರ್ಟ್!
ಶಿವಮೊಗ್ಗ-ಯಶವಂತಪುರ ತತ್ಕಾಲ್ ಎಕ್ಸ್ ಪ್ರೆಸ್/ ರೈಲಿಗೆ ಹಸಿರು ನಿಶಾನೆ/ ಇಂದಿನಿಂದ ಪ್ರತಿದಿನ ಸಂಚಾರ ಆರಂಭ/ ಎಲ್ಲ ಕಡೆ ಸ್ಟಾಪ್
ಶಿವಮೊಗ್ಗ [ಜ.23]: ಶಿವಮೊಗ್ಗ-ಯಶವಂತಪುರ ನಡುವೆ ತತ್ಕಾಲ್ ಎಕ್ಸ್‌ಪ್ರೆಸ್ ಹೊಸ ರೈಲಿಗೆ (ರೈಲು ಸಂಖ್ಯೆ-06539-06540) ಹಸಿರು ನಿಶಾನೆ ತೋರಲಾಗಿದೆ.
ರೈಲು ವೇಳಾಪಟ್ಟಿ ಸೇರಿದಂತೆ ಸಮಗ್ರ ಮಾಹಿತಿ
ಸಂಸದ ಬಿ.ವೈ.ರಾಘವೇಂದ್ರ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಯಶವಂತಪುರ-ಶಿವಮೊಗ್ಗ-ಯಶವಂತಪುರ ತತ್ಕಾಲ್ ಸ್ಪೆಷಲ್ ಆಗಿ ಸಂಚರಿಸಲಿದೆ. ಈ ರೈಲು ಬೆಳಗ್ಗೆ 9 ಗಂಟೆಗೆ ಯಶವಂತಪುರದಿಂದ ಹೊರಟು ಮಧ್ಯಾಹ್ನ 2.45 ಗಂಟೆಗೆ ಶಿವಮೊಗ್ಗ ತಲುಪಿ ಶಿವಮೊಗ್ಗದಿಂದ ಮಧ್ಯಾಹ್ನ 3.30 ಕ್ಕೆ ಹೊರಟು ರಾತ್ರಿ 9 ಕ್ಕೆ ಗಂಟೆಗೆ ಯಶವಂತಪುರ ತಲುಪಲಿದೆ. ಮಾರ್ಗ ಮಧ್ಯೆ ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬಿರೂರು, ತರೀಕೆರೆ ಹಾಗೂ ಭದ್ರಾವತಿಗಳಲ್ಲಿ ಈ ರೈಲು ನಿಲುಗಡೆ ಹೊಂದಿರುತ್ತದೆ.