ಬೀದರ್‌ನಲ್ಲಿ ಮಹಿಳೆಯರ ರೌದ್ರಾವತಾರ: ತಂತಿ ಬೇಲಿ ಕಿತ್ತೆಸೆದ ನಾರಿಯರು!

ಅಕ್ರಮವಾಗಿ ಸ್ಮಶಾನ ಭೂಮಿ ಒತ್ತುವರಿ| ತಂತಿ ಬೇಲಿ ಕಿತ್ತೆಸೆದ ಮಹಿಳೆಯರು| ಬೀದರ್ ತಾಲೂಕಿನ ಚಿಟ್ಟವಾಡಿಯಲ್ಲಿ ನಡೆದ ಘಟನೆ| ಹಿಂದೂಗಳಿಗೆ ಜಿಲ್ಲಾಡಳಿತದಿಂದ ನೀಡಲಾಗಿದ್ದ 4 ಎಕರೆ 38 ಗುಂಟೆ ಜಮೀನು| 

First Published Jan 29, 2020, 11:23 AM IST | Last Updated Jan 29, 2020, 11:25 AM IST

ಬೀದರ್(ಜ.29): ಅಕ್ರಮವಾಗಿ ಸ್ಮಶಾನ ಭೂಮಿ ಒತ್ತುವರಿ ಮಾಡಿದ ಹಿನ್ನೆಲೆಯಲ್ಲಿ ಒತ್ತುವರಿ ಜಾಗಕ್ಕೆ ಹಾಕಿದ್ದ ತಂತಿ ಬೇಲಿಯನ್ನು ಮಹಿಳೆಯರು ಕಿತ್ತೆಸೆದ ಘಟನೆ ತಾಲೂಕಿನ ಚಿಟ್ಟವಾಡಿಯಲ್ಲಿ ನಡೆದಿದೆ. ಹಿಂದೂಗಳಿಗೆ ಜಿಲ್ಲಾಡಳಿತದಿಂದ 4 ಎಕರೆ 38 ಗುಂಟೆ ಜಮೀನು ನೀಡಲಾಗಿತ್ತು. ಇದರಲ್ಲಿ 1 ಎಕರೆ 32 ಗುಂಟೆ ಜಮೀನನ್ನ ಅಕ್ರಮವಾಗಿ ತಂತಿ ಬೇಲಿ ಹಾಕಲಾಗಿದೆ. 

ಸರ್ಕಾರ ಅಲೌಟ್ ಮಾಡಿದ ಸ್ಮಶಾನ ಭೂಮಿಯಲ್ಲೇ ಚಂದ್ರಮ್ಮ ಗಂಡ ನರಸಿಂಗ ಎಂಬುವರ ಹೆಸರಲ್ಲಿ 1 ಎಕರೆ 32 ಗುಂಟೆ ನೀಡಲಾಗಿದೆ. ದಿಢೀರ್‌ನೇ ಈ ಜಮೀನು ಇವರ ಹೆಸರಿಗೆ ಹೇಗೆ ಬಂತು ಅಂತ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಅಧಿಕಾರಿಗಳು ಕೈವಾಡವಿದೆ ಅಂತ‌ ಆರೋಪಿಸಿ ಮಹಿಳೆಯರು ತಂತಿಬೇಲಿಯನ್ನು ಕಿತ್ತೆಸೆದಿದ್ದಾರೆ.