ಮಗಳನ್ನು ಕೊಂದ ಅಳಿಯನಿಗೆ ಶಿಕ್ಷೆ ಆಗಬೇಕು: ಕುಮಾರಸ್ವಾಮಿ ಕಾಲಿಗೆ ಬಿದ್ದು ಮಹಿಳೆ ಕಣ್ಣೀರು

ವಿಜಯಪುರದಲ್ಲಿ ನಡೆದ ಪಂಚರತ್ನ ಯಾತ್ರೆಯಲ್ಲಿ  ಕುಮಾರಸ್ವಾಮಿ ಬಳಿ ಸಮಸ್ಯೆ ಹೇಳಿಕೊಂಡ ಮಹಿಳೆ ಕಣ್ಣೀರಾಕಿದ್ದಾರೆ.

First Published Jan 23, 2023, 11:59 AM IST | Last Updated Jan 23, 2023, 11:59 AM IST

ಅಳಿಯ ತಮ್ಮ ಮಗಳನ್ನು ಬಾವಿಗೆ ತಳ್ಳಿ ಕೊಂದಿದ್ದಾನೆ, ಅಳಿಯನ ವಿರುದ್ಧ ಕ್ರಮಕ್ಕೆ ಜರುಗಿಸಲು ಹೆಚ್.ಡಿ ಕುಮಾರಸ್ವಾಮಿ ಬಳಿ ಮಹಿಳೆ ಸಮಸ್ಯೆ ಹೇಳಿಕೊಂಡಿದ್ದಾಳೆ. ಅಳಿಯನಿಗೆ ಶಿಕ್ಷೆ ಆಗಬೇಕು, ಬೇರೆ ಏನೂ ಸಹಾಯ ಬೇಡ ಎಂದು ಕಾಲು ಹಿಡಿದು ಕುಮಾರಸ್ವಾಮಿ ಅತ್ತಿದ್ದಾಳೆ. ಗ್ರಾಮಾಂತರ ಪೊಲೀಸರಿಗೆ ದೂರು ಕೊಟ್ಟರೂ, ಪೊಲೀಸರು ತನ್ನನ್ನೇ ಗದರಿ ಕಳುಹಿಸುತ್ತಿದ್ದಾರೆ ಎಂದು ಮಹಿಳೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸ್ಥಳದಲ್ಲೇ ಪೊಲೀಸ್‌ ಮಹಾ ನಿರ್ದೇಶಕರಿಗೆ ಕರೆ ಮಾಡಿದ ಹೆಚ್‌ಡಿಕೆ, ಬಬಲೇಶ್ವರದ ನಿಡೊಣಿ ಗ್ರಾಮಕ್ಕೆ ಬನ್ನಿ ಎಂದು ಹೇಳಿ ಸಮಸ್ಯೆ ಬಗೆಹರಿಸುವಂತೆ ತಿಳಿಸಿದ್ದಾರೆ.

ಒಕ್ಕಲಿಗರ ಪ್ರಬಲ ನಾಯಕನಾಗಲು ಡಿಕೆಶಿ ಪ್ಲಾನ್: ಕನಕಪುರ ತೊರೆದು ಮದ್ದೂರಿನಿಂದ ಸ್ಪರ್ಧೆ?

Video Top Stories