ಸಿಂದಗಿ ಉಪ ಚುನಾವಣಾ ಅಖಾಡಕ್ಕೆ ಲಕ್ಷ್ಮಣ ಸವದಿ ಎಂಟ್ರಿ..?

ಸಿಂದಗಿ ಕ್ಷೇತ್ರದಿಂದ ಡಿಸಿಎಂ ಲಕ್ಷ್ಮಣ ಸವದಿ ಸ್ಪರ್ಧೆ ವಿಚಾರ| ನಾವು ಪಕ್ಷದ ಶಿಸ್ತಿನ ಸಿಪಾಯಿಗಳು| ಪಕ್ಷದ ಆಜ್ಞೆ ಮೀರೋದಿಲ್ಲ| ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ನಮ್ಮಲ್ಲಿ ಇಲ್ಲ| ನಾವೆಂದು ಇದರ ಬಗ್ಗೆ ವಿಚಾರ ಮಾಡಿಯೂ ಇಲ್ಲ: ಚಿದಾನಂದ ಸವದಿ| 
 

First Published Feb 17, 2021, 9:06 AM IST | Last Updated Feb 17, 2021, 9:06 AM IST

ವಿಜಯಪುರ(ಫೆ.17): ಜಿಲ್ಲೆಯ ಸಿಂದಗಿಯಿಂದ ನಾನು ಇಲ್ಲಾ ನಮ್ಮ ತಂದೆ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳು ಎದ್ದಿವೆ. ನಾನಂತು ಸ್ಪರ್ಧೆ ಮಾಡೋದಿಲ್ಲ, ನನಗೆ ಸಿಂದಗಿ ಕ್ಷೇತ್ರದಲ್ಲಿ ಸ್ಪರ್ಧೆಯ ಯಾವ ಆಸಕ್ತಿಯೂ ಇಲ್ಲ. ನಾವು ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಪಕ್ಷ ಹೇಳಿದ್ರೆ ಲಕ್ಷ್ಮಣ ಸವದಿ ಸ್ಪರ್ಧೆ ಪಕ್ಕಾ ಎಂದು ಅವರ ಪುತ್ರ ಚಿದಾನಂದ ಸವದಿ ಸ್ಪಷ್ಟಪಡಿಸಿದ್ದಾರೆ. 

ರಾಮ ಮಂದಿರ ದೇಣಿಗೆ; ವಿವಾದಾತ್ಮಕ ಹೇಳಿಕೆ ನೀಡಿ ಕೈಸುಟ್ಟುಕೊಂಡ ಹೆಚ್‌ಡಿಕೆ, ಸಿದ್ದು!

ನಾವು ಪಕ್ಷದ ಶಿಸ್ತಿನ ಸಿಪಾಯಿಗಳಾಗಿದ್ದೇವೆ. ಪಕ್ಷದ ಆಜ್ಞೆಯನ್ನ ಮೀರುವುದಿಲ್ಲ. ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ನಮ್ಮಲ್ಲಿ ಇಲ್ಲ. ನಾವೆಂದು ಇದರ ಬಗ್ಗೆ ವಿಚಾರ ಮಾಡಿಯೂ ಇಲ್ಲ. ನನಗೆ ಸಿಂದಗಿ ಕ್ಷೇತ್ರದ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ಪಕ್ಷ ಸೂಚಿಸಿದ್ರೆ ತಂದೆ ಸಿಂದಗಿಯಿಂದ ಸ್ಪರ್ಧಿಸಲಿದ್ದಾರೆ. ಅಥವಾ ಪಕ್ಷ ಸೂಚಿಸುವ ಅಭ್ಯರ್ಥಿಯನ್ನ ಗೆಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ. 
 

Video Top Stories