BJP MLA ಕೊರೋನಾ ರೂಲ್ಸ್ ಲೆಕ್ಕಿಸದೇ ಡಾನ್ಸ್ ಮಾಡಿದ ಬಿಜೆಪಿ ಶಾಸಕ, ವಿಡಿಯೋ ವೈರಲ್
ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸೋಂಕು ನಿಯಂತ್ರಿಸಲು ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಅಲ್ಲದೇ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಸರ್ಕಾರ ಸಾರಿ-ಸಾರಿ ಹೇಳುತ್ತಿದೆ. ಆದ್ರೆ, ಕೋವಿಡ್ ನಿಯಮ ಉಲ್ಲಂಘಿಸಿ ಬಿಜೆಪಿ ಶಾಸಕನಿಂದ ಸಕ್ಕತ್ ಡಾನ್ಸ್ ಮಾಡಿದ್ದಾರೆ.
ಬೀದರ್, (ಜ.08): ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸೋಂಕು ನಿಯಂತ್ರಿಸಲು ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ.
ಅಲ್ಲದೇ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಸರ್ಕಾರ ಸಾರಿ-ಸಾರಿ ಹೇಳುತ್ತಿದೆ. ಆದ್ರೆ, ಕೋವಿಡ್ ನಿಯಮ ಉಲ್ಲಂಘಿಸಿ ಬಿಜೆಪಿ ಶಾಸಕನಿಂದ ಸಕ್ಕತ್ ಡಾನ್ಸ್ ಮಾಡಿದ್ದಾರೆ.
Covid Crisis : ಆಘಾತಕಾರಿ ಅಂಶ: ಮಕ್ಕಳೇ ಕೊರೋನಾ 3ನೇ ಅಲೆಯ ಟಾರ್ಗೆಟ್?
ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ ಕೋವಿಡ್ ರೂಲ್ಸ್ ಉಲ್ಲಂಘಿಸಿ ಕುಣಿದು ಕುಪ್ಪಳಿಸಿದ್ದಾರೆ. ಮಾಸ್ಕ್ ಇಲ್ಲ, ಸಾಮಾಜಿಕ ಅಂತರ ಅಂತೂ ಇಲ್ಲವೇ ಇಲ್ಲ. ಡಾನ್ಸ್ ಕ್ರೇಜಿ ಅಕಾಡಮಿ ಉದ್ಘಾಟನೆ ಮಾಡಿ ಶರಣು ಸಲಗರ ಸ್ಟೆಪ್ಸ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಾಸಕರ ವರ್ತನೆಗೆ ಕಲ್ಯಾಣ ನಾಡಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜನರಿಗೊಂದು ನ್ಯಾಯ ಜನಪ್ರತಿನಿಧಿಗಳಿಗೆ ಒಂದು ನ್ಯಾಯಾನಾ? ಎಂದು ಪ್ರಶ್ನಿಸಿದ್ದಾರೆ.