
KSRTC ಬಸ್ ಓಡಿಸಲು ಬಿಡಲ್ಲ: ಖಾಸಗಿ ಬಸ್ ಸಿಬ್ಬಂದಿ ಪಟ್ಟು..!
ಖಾಸಗಿ ಬಸ್ ಹಾಗೂ ಸಾರಿಗೆ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ| ಸ್ಯಾಟ್‌ಲೈಟ್ ಬಸ್ ನಿಲ್ದಾಣದಲ್ಲಿ ನಡೆದ ಘಟನೆ| ಸ್ಯಾಟ್‌ಲೈಟ್ ಬಸ್ ನಿಲ್ದಾಣಕ್ಕೆ 5 ಸರ್ಕಾರಿ ಬಸ್‌ಗಳು ಬಂದಿದ್ದಕ್ಕೆ ಗಲಾಟೆ| ಮೊದಲು ನಮ್ಮ ಬಸ್ ಹತ್ತಲಿ ಆಮೇಲೆ ನಿಮಗೆ|
ಬೆಂಗಳೂರು(ಏ.09): ಖಾಸಗಿ ಬಸ್ ಹಾಗೂ ಸಾರಿಗೆ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ ನಡೆದ ಘಟನೆ ಇಂದು(ಶುಕ್ರವಾರ) ನಗರದ ಸ್ಯಾಟ್‌ಲೈಟ್ ಬಸ್ ನಿಲ್ದಾಣದಲ್ಲಿ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್ ಓಡಿಸೋಕೆ ಬಿಡೋದಿಲ್ಲ ಅಂತ ಖಾಸಗಿ ಬಸ್ ಸಿಬ್ಬಂದಿ ಪಟ್ಟು ಹಿಡಿದಿದ್ದರು. ಸ್ಯಾಟ್‌ಲೈಟ್ ಬಸ್ ನಿಲ್ದಾಣಕ್ಕೆ 5 ಸರ್ಕಾರಿ ಬಸ್‌ಗಳು ಬಂದಿದ್ದಕ್ಕೆ ಗಲಾಟೆ ನಡೆದಿದೆ. ನಮಗೆ ಪರ್ಮಿಟ್ ಕೊಟ್ಟು ಈಗ ಸರ್ಕಾರಿ ಬಸ್ ಬಿಟ್ಟಿದ್ದಾರೆ. ಜನರು ಮೊದಲು ನಮ್ಮ ಬಸ್ ಹತ್ತಲಿ ಆಮೇಲೆ ನಿಮಗೆ ಅಂತ ಸಾರಿಗೆ ನೌಕರರಿಗೆ ಖಾಸಗಿ ಬಸ್ ಸಿಬ್ಬಂದಿ ತಾಕೀತು ಮಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ