Asianet Suvarna News Asianet Suvarna News

BIG 3 Impact: ಅಂದು ಬೀದಿ ಬದಿ ಹಾಡುತ್ತಿದ್ದ ಅಂಧರು ಇಂದು ಸೆಲೆಬ್ರೆಟಿಗಳು!

ಖಾಸಗಿ ವಾಹಿನಿ ಸಿಂಗಿಂಗ್ ಕಾರ್ಯಕ್ರಮಕ್ಕೆ ಆಯ್ಕೆಯಾದ ಅಂಧರು| ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಅಂಧರು| ಅಂಧರ ಮಧುರ ಕಂಠಕ್ಕೆ ಮೂವಿಸ್ಮಿತರಾದ ರಾಜೇಶ್ ಕೃಷ್ಣನ್ , ಹಂಸಲೇಖಮ ಹಾಗೂ ಅರ್ಜುನ್ ಜನ್ಯ|

ತುಮಕೂರು[ಫೆ.15]: ಜಿಲ್ಲೆಯ ಮಧುಗಿರಿ ತಾಲೂಕಿನ ಗ್ರಾಮದವೊಂದರಲ್ಲಿ ಒಂದೇ ಕುಟುಂಬದ ಮೂವರು ಅಂಧರಿಗೆ ಏಳು ತಿಂಗಳಿಂದ ಪೆನ್ಷನ್ ಬಂದಿರಲಿಲ್ಲ ಅಂತ 20-06-2018 ರಂದು ಸುವರ್ಣ ನ್ಯೂಸ್ ಬಿಗ್ 3 ಕಾರ್ಯಕ್ರಮದಲ್ಲಿ ವರದಿ ಪ್ರಸಾರ ಮಾಡಿತ್ತು. ವರದಿ ಮಾಡಿದ ಕೇವಲ ಒಂದೇ ದಿನದಲ್ಲಿ ಇವರಿಗೆ ಸರ್ಕಾರದಿಂದ ಪೆನ್ಷನ್ ಸಿಕ್ಕಿತ್ತು. ಅಂದು ಈ ಅಂಧರು ಹಾಡಿದ ಹಾಡಿಗೆ ಇಡೀ ಕರುನಾಡು ಫಿದಾ ಆಗಿತ್ತು. 

ಅಂದು ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಈ ಅಂಧರು ರಸ್ತೆ ಬದಿ ಹಾಡುವ ಮೂಲಕ ಸಂಪದಾನೆ ಮಾಡಿಕೊಳ್ಳುತ್ತಿದ್ದರು. ಆದರೆ, ಇಂದು ಈ ಅಂಧರು ಖಾಸಗಿ ವಾಹಿನಿಯ ಸಿಂಗಿಂಗ್ ಕಾರ್ಯಕ್ರಮದಲ್ಲಿ ಆಯ್ಕೆಯಾಗಿದ್ದಾರೆ. ಇವರ ಮಧುರ ಕಂಠಕ್ಕೆ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ , ನಾದಬ್ರಹ್ಮ ಹಂಸಲೇಖಮ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೂಕವಿಸ್ಮಿತರಾಗಿದ್ದಾರೆ. 
 

ಫೆಬ್ರವರಿ 15ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ