Asianet Suvarna News Asianet Suvarna News

ರೌಡಿ ಪರೇಡ್‌: ಕುಖ್ಯಾತ ರೌಡಿಗೆ ಪಬ್ಲಿಕ್‌ನಲ್ಲೇ ಎಸ್ಪಿ ಕಪಾಳಮೋಕ್ಷ

ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ರೌಡಿಗಳ ಪರೇಡ್‌| ಪರೇಡ್ ನಡೆಸುವ ವೇಳೆ ಬಡ್ಡಿ ವ್ಯವಹಾರದ ರೌಡಿಶೀಟರ್‌ ಭೀಮಶಿ ಭಜಂತ್ರಿ ಕೆನ್ನೆಗೆ ಬಾರಿಸಿದ ಎಸ್ಪಿ| ಗನ್ ಲೈಸೆನ್ಸ್ ಅನುಮತಿ ಹೊಂದಿ ಹೆದರಿಸಿದ ಆರೋಪ ಭೀಮಶಿ ಭಜಂತ್ರಿ ಮೇಲಿದೆ| 

Nov 21, 2020, 9:50 AM IST

ವಿಜಯಪುರ(ನ.21): ಇಂದು(ಶನಿವಾರ) ಬೆಳ್ಳಂಬೆಳಗ್ಗೆ ರೌಡಿಗಳ ಪರೇಡ್ ನಡೆಸಲಾಗಿದೆ. ಈ ವೇಳೆ ಎಸ್ಪಿ ಅನುಪಮ್ ಅಗರವಾಲ್ ಅವರು ರೌಡಿ ಕೆನ್ನೆಗೆ ಬಾರಿಸಿದ್ದಾರೆ. ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ರೌಡಿಗಳ ಪರೇಡ್ ನಡೆಸುವ ವೇಳೆ ಬಡ್ಡಿ ವ್ಯವಹಾರದ ರೌಡಿಶೀಟರ್‌ಗೆ ಕೆನ್ನೆಗೆ ಎಸ್ಪಿ ಬಾರಿಸಿದ್ದಾರೆ. 

ಕರ್ನಾಟಕ ಬಂದ್‌ಗೆ ನಮ್ಮ ಬೆಂಬಲ ಇಲ್ಲ, ಕೊರೊನಾ ಸಂಕಷ್ಟದ ವೇಳೆ ಬಂದ್ ಅಗತ್ಯ ಇಲ್ಲ: ನಾರಾಯಣಗೌಡ

ರೌಡಿಗಳ ಪರೇಡ್ ವೇಳೆ ಭೀಮಶಿ ಭಜಂತ್ರಿ ತಲೆಗೂದಲು ಹಿಡಿದು ಕೆನ್ನೆಗೆ ಎಸ್ಪಿ ಅನುಪಮ್ ಅಗರವಾಲ್ ಬಾರಿಸಿದ್ದಾರೆ. ಗನ್ ಲೈಸೆನ್ಸ್ ಅನುಮತಿ ಹೊಂದಿ ಹೆದರಿಸಿದ ಆರೋಪ ಭೀಮಶಿ ಭಜಂತ್ರಿ ಮೇಲಿದೆ. ವಿಜಯಪುರ ನಗರದ ನಾನಾ ಪೊಲೀಸ್ ಠಾಣೆಗಳ ಸುಮಾರು 110ಕ್ಕೂ ಹೆಚ್ಚು ರೌಡಿಗಳ ಪರೇಡ್ ನಡೆಸಲಾಗಿದೆ.