Karwar: ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಹಾಡಿಗೆ ಸಿಬ್ಬಂದಿ ಫಿದಾ!

ಅತ್ಯುತ್ತಮ ಅಧಿಕಾರಿ ಎಂದು ಖ್ಯಾತಿ ಪಡೆದಿರುವ ಉತ್ತರಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್, ತನ್ನ ಕೆಲಸದ ಒತ್ತಡದ ನಡುವೆಯೂ ತಾನೊಬ್ಬ ಉತ್ತಮ ಗಾಯಕ ಎಂದು ತೋರ್ಪಡಿಸಿದ್ದಾರೆ. 

First Published May 25, 2022, 8:56 PM IST | Last Updated May 25, 2022, 8:56 PM IST

ಕಾರವಾರ (ಮೇ.25): ಅತ್ಯುತ್ತಮ ಅಧಿಕಾರಿ ಎಂದು ಖ್ಯಾತಿ ಪಡೆದಿರುವ ಉತ್ತರಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್, ತನ್ನ ಕೆಲಸದ ಒತ್ತಡದ ನಡುವೆಯೂ ತಾನೊಬ್ಬ ಉತ್ತಮ ಗಾಯಕ ಎಂದು ತೋರ್ಪಡಿಸಿದ್ದಾರೆ. ದಿನವಿಡೀ ಕಚೇರಿ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸುವ ಜಿಲ್ಲಾಧಿಕಾರಿ ಮೊನ್ನೆ ಮಾತ್ರ ಮಧುರಾ...ಪಿಸು ಮಾತಿಗೆ.., ಊರ್ವಶಿ...ಊರ್ವಶಿ...ಹಮ್ಮಾ...ಹಮ್ಮಾ...ಮುಂತಾದ ಚಲನಚಿತ್ರದ ಹಾಡನ್ನು ಸುಶ್ರಾವ್ಯವಾಗಿ ಹಾಡಿ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಯನ್ನು ರಂಜಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ರವಿವಾರ ನಡೆದ ಕಂದಾಯ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ, ರಾತ್ರಿ ಡಿಲಕ್ಸ್ ಮೈದಾನದಲ್ಲಿ ನಡೆದ  ಮನೋರಂಜನಾ ಕಾರ್ಯಕ್ರಮದಲ್ಲಿ ಹಾಡನ್ನು ಹೇಳಿ ನೃತ್ಯ ಮಾಡುತ್ತಾ ಸಂಭ್ರಮಿಸಿದರು. 

ಸೇತುವೆ ಕಾಮಗಾರಿ ಮುಗಿದು 2 ವರ್ಷವಾದ್ರೂ ಬ್ರಿಡ್ಜ್‌ಗಿಲ್ಲ ಸಂಪರ್ಕ ರಸ್ತೆ..!

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೂಡಾ ಡಿಸಿ ಹಾಡಿಗೆ ಶಿಳ್ಳೆ ಹಾಕಿ, ಚಪ್ಪಾಳೆ ತಟ್ಟಿ ಭರ್ಜರಿ ಸ್ಟೆಪ್ ಹಾಕಿ ಕುಣಿದಿದ್ದಾರೆ. ವರ್ಷವಿಡೀ ಕಚೇರಿ, ಅಭಿವೃದ್ಧಿ ಕಾರ್ಯ, ಸಾರ್ವಜನಿಕರ ಸಮಸ್ಯೆ ಪರಿಹಾರದ ಬಗ್ಗೆಯೇ ಕೆಲಸ ಮಾಡುತ್ತಿದ್ದ ಜಿಲ್ಲಾಧಿಕಾರಿ, ಮೊನ್ನೆಯಂತೂ ತಮ್ಮ ಸಹೋದ್ಯೋಗಿಗಳ ಜತೆ ದಿನವಿಡೀ ಕಾಲಕಳೆದರಿದ್ದಾರೆ. ದಾಂಡೇಲಿಯ ಡಿಎಫ್ಎ ಮೈದಾನದಲ್ಲಿ ರೆವಿನ್ಯೂ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ, ಓಟದ ಸ್ಪರ್ಧೆಗಳನ್ನೂ ಆಯೋಜಿಸಲಾಗಿತ್ತು. ಕಾರವಾರ ಉಪವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ, ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಸೇರಿದಂತೆ ಇತರ ಅಧಿಕಾರಿ ವರ್ಗ ಭಾಗಿಯಾಗಿದ್ದರು. ಬಳಿಕ ಸಂಜೆ ವೇಳೆ ಡಿಲಕ್ಸ್ ಮೈದಾನದಲ್ಲಿ ನಡೆದ ಮನೋರಂಜನಾ ಕಾರ್ಯಕ್ರಮದಲ್ಲಿ ಭರ್ಜರಿ ಹಾಡು ಹಾಡಿ, ಸ್ಟೆಪ್ ಹಾಕಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆ ಸಂಭ್ರಮಿಸಿದ್ದಾರೆ.