ಬುಡಕಟ್ಟು ಜನಾಂಗದ ಅಪರೂಪದ ಪ್ರತಿಭೆಗೆ ಕೃಷ್ಣಮಠ ವೇದಿಕೆ

ಹಲವು ಪ್ರಯೋಜನವುಳ್ಳ ಮುಂಡಾಕದ ಎಲೆಯಿಂದ ನಾನಾ ಬಗೆಯ ಪ್ರಯೋಜನಗಳಿವೆ. ಈ ಎಲೆಯನ್ನು ಬಳಸಿಕೊಂಡು, ಗೊಡ್ಡ ಮೊಗೇರ ಎಂಬ ಬುಡಕಟ್ಟು ಜಾತಿಯ ಜನ ಅನೇಕ ಉತ್ಪನ್ನಗಳನ್ನು ತಯಾರಿಸುತ್ತಾರೆ. ಎಲ್ಲಕ್ಕಿಂತಲೂ ಅವರು ಈ ಎಲೆಯಿಂದ ತಯಾರಿಸುವ ಚಾಪೆ, ಅದ್ಭುತವಾಗಿದೆ. ಕಲಾತ್ಮಕವಾಗಿ ಎಲೆಯನ್ನು ಜೋಡಿಸಿ ಚಾಪೆ ತಯಾರಿಸುವ ಕೈಚಳಕ, ಈ ಜನಾಂಗದವರಿಗೆ ಮಾತ್ರ ಗೊತ್ತು.

ಈ ಜನಾಂಗದ ಜನರನ್ನು ಉಡುಪಿಯ ಕೃಷ್ಣಮಠಕ್ಕೆ ಬರಮಾಡಿಕೊಳ್ಳಲಾಗಿತ್ತು. ಮಠದ ಆವರಣದಲ್ಲಿ ಎಲೆಗಳನ್ನೆಲ್ಲ ಜೋಡಿಸಿ ಬಗೆಬಗೆ ಚಾಪೆಯನ್ನು ತಯಾರಿಸಲು ಅವಕಾಶ ನೀಡಲಾಗಿತ್ತು. ಮಠದ ಪ್ರತಿಯೊಂದು ಆಚರಣೆಯಲ್ಲೂ ದೇಸಿ ತನಕ್ಕೆ ಒತ್ತು ನೀಡುವ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರು, ಈ ಬುಡಕಟ್ಟು ಜನರ ಪ್ರತಿಭೆಗೆ ಮಾರುಹೋಗಿದ್ದರು. ರಾಜಾಂಗಣದ ಆವರಣದಲ್ಲಿ ಚಾಪೆ ತಯಾರಿಸಿ ಪ್ರದರ್ಶಿಸಿ ಮಾರಾಟ ಮಾಡಲು ಅವಕಾಶ ನೀಡಿದ್ದರು. ನಶಿಸುತ್ತಿರುವ ಬುಡಕಟ್ಟು ಜನಾಂಗಗಳ ಇಂತಹ ಅಪರೂಪದ ಕಲೆಗೆ, ವೇದಿಕೆ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿತ್ತು.

First Published Sep 30, 2021, 3:26 PM IST | Last Updated Sep 30, 2021, 3:26 PM IST

ಉಡುಪಿ (ಸೆ.30):  ಹಲವು ಪ್ರಯೋಜನವುಳ್ಳ ಮುಂಡಾಕದ ಎಲೆಯಿಂದ ನಾನಾ ಬಗೆಯ ಪ್ರಯೋಜನಗಳಿವೆ. ಈ ಎಲೆಯನ್ನು ಬಳಸಿಕೊಂಡು, ಗೊಡ್ಡ ಮೊಗೇರ ಎಂಬ ಬುಡಕಟ್ಟು ಜಾತಿಯ ಜನ ಅನೇಕ ಉತ್ಪನ್ನಗಳನ್ನು ತಯಾರಿಸುತ್ತಾರೆ. ಎಲ್ಲಕ್ಕಿಂತಲೂ ಅವರು ಈ ಎಲೆಯಿಂದ ತಯಾರಿಸುವ ಚಾಪೆ, ಅದ್ಭುತವಾಗಿದೆ. ಕಲಾತ್ಮಕವಾಗಿ ಎಲೆಯನ್ನು ಜೋಡಿಸಿ ಚಾಪೆ ತಯಾರಿಸುವ ಕೈಚಳಕ, ಈ ಜನಾಂಗದವರಿಗೆ ಮಾತ್ರ ಗೊತ್ತು.

ಜನ್ಮಾಷ್ಟಮಿ: ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಅವಕಾಶ