Asianet Suvarna News Asianet Suvarna News

Tumkakuru Rain: ಹುಚ್ಚಾಟ ಮಾಡಿ ಬೈಕ್ ಸಮೇತ ಕೊಚ್ಚಿ ಹೋದ ಸವಾರ

ತುಮಕೂರು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆಸಿದ್ದು, ಹರಿಯುವ ನೀರಿನಲ್ಲಿ ಬೈಕ್ ಸವಾರನೊಬ್ಬ ಹುಚ್ಚಾಟ ಮಾಡಿ ಬೈಕ್ ಸಮೇತ ಕೊಚ್ಚಿ ಹೋಗಿದ್ದು, ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

First Published Aug 29, 2022, 11:57 AM IST | Last Updated Aug 29, 2022, 11:57 AM IST

ತುಮಕೂರು ಜಿಲ್ಲೆಯಲ್ಲಿ ಒಂದೆರೆಡು ದಿವಸ ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ಆರ್ಭಟಿಸುತ್ತಿದ್ದಾನೆ ಮಳೆಯಿಂದಾಗಿ ಆಟದ ಮೈದಾನಗಳು ಕೆಸರಿನ ಗದ್ದೆಯಾಗಿ ಬದಲಾಗಿದೆ. ರಾತ್ರಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಸತತ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ನಡುವೆ ತುಂಬಿ ಹರಿಯುವ ನೀರಿನಲ್ಲಿ ಬೈಕ್ ಸವಾರನೊಬ್ಬ ಹುಚ್ಚಾಟ ಮಾಡಿ ಬೈಕ್ ಸಮೇತ ಕೊಚ್ಚಿ ಹೋಗಿದ್ದಾನೆ. ತಕ್ಷಣ ಜಾಗೃತರಾದ ಸ್ಥಳೀಯರು ಆತನನ್ನು ರಕ್ಷಣೆ ಮಾಡಿದ್ದಾರೆ.