ಬಳ್ಳಾರಿ ದುರಂತದ ಭಯಾನಕ ಸತ್ಯ ಬಯಲು: ಬಡ ಹೆಣ್ಣು ಮಕ್ಕಳ ಜೀವದ ಜೊತೆ ಇದೆಂಥಾ ಚೆಲ್ಲಾಟ?
ಇದೇ ವಿಚಾರವನ್ನು ಮುಂದಿಡ್ಕೊಂಡು ವಿಪಕ್ಷಗಳು ಸರ್ಕಾರದ ಮೇಲೆ ಮುಗಿ ಬಿದ್ದಿವೆ. ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಿಗೆ ವಿಪಕ್ಷಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿವೆ. ಆರೋಗ್ಯ ಸಚಿವ ದಿನೇಶ ಗುಂಡೂರವ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಕೆಂಡ ಕಾರ್ತಿವೆ.
ಬಳ್ಳಾರಿ(ನ.30): ಪುಟ್ಟ ಜೀವಗಳು ಹುಟ್ಟಿ ದಿನಗಳು ಕಳೆದಿದ್ದವು ಅಷ್ಟೆ. ಸತ್ತು ಬದುಕಿದಂತಹ ನೋವನ್ನ ಅನುಭವಿಸಿ ಜನ್ಮ ಕೊಟ್ಟಿದ್ದವು ಆ ಹೆಣ್ಣು ಜೀವಗಳು.. ಆದ್ರೆ, ಆ ಹೆಣ್ಣು ಜೀವಗಳೇ ಇಂದಿಲ್ಲ. ಒಂದಲ್ಲ… ಎರಡಲ್ಲ ಬಾಣಂತಿಯರ ಸಾವಿನ ಮರಣ ಮೃದಂಗವೇ ಬಾರಿಸಿದೆ. ನಿರ್ಲಕ್ಷ್ಯವೋ..? ನಿರ್ಲಜ್ಜತನವೋ..? ಇನ್ನೆಷ್ಟು ಬಾಣಂತಿಯರ ಬಲಿ ಬೇಕು..? ರಾಜ್ಯದ ಬಡ ಹೆಣ್ಣು ಮಕ್ಕಳ ಜೀವದ ಜೊತೆಗೆ ಇದೆಂಥಾ ಚೆಲ್ಲಾಟ..? ಜೀವ ಕೊಟ್ಟ ಜೀವಗಳನ್ನೇ ತೆಗೆದುಬಿಡ್ತಾ ಮೆಡಿಕಲ್ ಮಾಫಿಯಾ..? ಇದೇ ಈ ಹೊತ್ತಿನ ವಿಶೇಷ ಬಾಣಂತಿಯರ ಬಲಿ..
ಸದ್ಯ ಇದೇ ವಿಚಾರವನ್ನು ಮುಂದಿಡ್ಕೊಂಡು ವಿಪಕ್ಷಗಳು ಸರ್ಕಾರದ ಮೇಲೆ ಮುಗಿ ಬಿದ್ದಿವೆ. ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಿಗೆ ವಿಪಕ್ಷಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿವೆ. ಆರೋಗ್ಯ ಸಚಿವ ದಿನೇಶ ಗುಂಡೂರವ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಕೆಂಡ ಕಾರ್ತಿವೆ.
ಫೆಂಗಲ್ ಅಬ್ಬರ: ಕಾದಿದ್ಯಾ ಮತ್ತೊಂದು ದುರಂತ, ರಾಜ್ಯಕ್ಕೂ ಇದ್ಯಾ ಆತಂಕ?
ರಾಜಕೀಯ ಆರೋಪ – ಪ್ರತ್ಯಾರೋಪಗಳು ಏನೇ ಇರಲಿ.. ಸಾವಿಗೆ ಕಾರಣವೂ ಕೂಡ ಏನೇ ಆಗಿರಲಿ.. ಹೋದ ಜೀವಗಳು ಮತ್ತೆ ಬರಲ್ಲ. ಆ ನೋವು ಬಲಿಯಾದ ಬಾಣಂತಿಯರ ಕುಟುಂಬವನ್ನ ಕಾಡ್ತಿದೆ.
ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಾಗಿದೆ. ಸಾವಿನ ಅರ್ಧ ಸತ್ಯ ಈಗಾಗಲೇ ಹೊರಬಿದ್ದಿದ್ದು ಇನ್ನರ್ಧ ಸತ್ಯ ಹೊರ ಬರಬೇಕಿದೆ. ಇಂದಲ್ಲಾ, ನಾಳೆ ಸಾವಿಗೆ ಕಾರಣ ಏನು ಅಂತ ಗೊತ್ತಾಗ್ಬಹುದು. ಆದ್ರೆ, ಸತ್ತು ಹೋದ ಆ ಜೀವಗಳು ಮತ್ತೆ ಮರಳಿ ಬರುತ್ವಾ..? ಹೆಣ್ಣು ಮಕ್ಕಳನ್ನ ಕಳೆದುಕೊಂಡ ಆ ಕುಟುಂಬದವರ ಆಕ್ರಂದನವನ್ನ ನೋಡೋದಿಕ್ಕೆ ಸಾಧ್ಯವೇ ಇಲ್ಲ.
ನಾಲ್ಕು ಬಾಣಂತಿಯರ ಸಾವಿಗೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಯಾರ ನಿರ್ಲಕ್ಷ್ಯವು ಕಾರಣವಲ್ಲವಂತೆ. ಹಾಗಿದ್ರೆ, ನಾಲ್ಕು ಬಡ ಬಾಣಂತಿಯರು ಅಲ್ಲಿ ಬಲಿಯಾಗಿದ್ದು ಹೇಗೆ..? ತಾಯಿ ಇಲ್ಲದೇ ತಬ್ಬಲಿಯಾಗಿದ್ದಾವಲ್ಲಾ ಆ ಹಸುಗೂಸುಗಳು ಅವುಗಳು ನಮ್ಮ ಹಡೆದವ್ವನಿಗೆ ಏನಾಯ್ತು ಅಂತ ಕೇಳಿದ್ರೆ ಅದಕ್ಕೆ ಉತ್ತರವೇನು..? ಸದ್ಯಕ್ಕೆ ತಜ್ಞರ ತಂಡ ಇದಕ್ಕೆ ಉತ್ತರ ಕೊಟ್ಟಿದೆ. ಹಾಗಿದ್ರೆ, ಏನಾ ಉತ್ತರ..? ಇಲ್ಲಿ ಮೆಡಿಕಲ್ ಮಾಫಿಯಾದ ಕರಾಳತೆ ಅದೆಷ್ಟು ಭಯಾನಕವಾಗಿದೆ ಗೊತ್ತಾ.