ಆನಂದ್​​ ಗುರೂಜಿಗೆ ಬ್ಲ್ಯಾಕ್​​​ಮೇಲ್​ ಮಾಡಿದ್ಲಾ ದಿವ್ಯಾ ವಸಂತ? ಅವರ ವಿಡಿಯೋ ಇವಳ ಬಳಿ ಇದ್ಯಾ?

ದಿವ್ಯಾ ವಸಂತಾ ಆರೋಪ ನಾವು ಸುಳ್ಳು ಸುದ್ದಿ ಮಾಡುತ್ತಿದ್ದೇವೆ ಅಂತ. ಹಾಗಾದ್ರೆ ಆಕೆಯ ಆರೋಪಕ್ಕೆ ನಾವು ಉತ್ತರ ಕೊಡಲೇಬೇಕಲ್ವಾ..? ಆ ಕೆಲಸವನ್ನ ಬ್ರೇಕ್​ ಆದ್ಮೇಲೆ ಮಾಡ್ತೀವಿ ಅಷ್ಟೇ ಅಲ್ಲ ಸ್ವತಹ ಆನಂದ್​​ ಗುರೂಜಿಯೇ ಈ ಗ್ಯಾಂಗ್​ ಮಾಡಿದ್ದ ಡೀಲ್​ ಕಹನಿಯನ್ನ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಅವರು ಖ್ಯಾತ ಜ್ಯೋತಿಷಿ, ವಾಸ್ತು ಶಿಲ್ಪಿ... ಬೆಳಗ್ಗೆ ಆಗ್ತಿದ್ದಂತೆ ಖಾಸಗಿ ಚಾನಲ್​ನಲ್ಲಿ ಬಂದು ತಮ್ಮ ಫಾಲೋವರ್ಸ್​​ ಮತ್ತು ಭಕ್ತರಿಗೆ ಸಲಹೆಗಳನ್ನ ಮತ್ತು ಸೂಚನೆಗಳನ್ನ ಕೊಡುತ್ತಿದ್ದವರು. ಅವರಿಗೆ ರಾಜ್ಯದ ಮೂಲೆ ಮೂಲೆಯಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರ ಮಾತುಗಳನ್ನೇ ವೇದವಾಖ್ಯವನ್ನಾಗಿ ಮಾಡಿಕೊಂಡು ಅವರು ಹೇಳಿದಂತೆ ಕೇಳುವ ಭಕ್ತರಿದ್ದಾರೆ. ಆದ್ರೆ ಇವತ್ತು ಇದೇ ಗುರೂಜಿ ಪೊಲೀಸ್​​ ಠಾಣೆ ಮೆಟ್ಟಿಲ್ಲೇರಿದ್ದಾರೆ. ನನಗೆ ಮೋಸವಾಗಿದೆ. ನನ್ನನ್ನ ಬ್ಲ್ಯಾಕ್​ ಮೇಲ್​ ಮಾಡ್ತಿದ್ದಾರೆ. ನನ್ನ ವಿಡಿಯೋ ಇದೆ ಅಂತ ಹೆದರಿಸುತ್ತಿದ್ದಾರೆ ಅಂತ ಕಂಪ್ಲೆಂಟ್​​ ದಾಖಲಿಸಿದ್ದಾರೆ. ಹಾಗಾದ್ರೆ ಬ್ಲ್ಯಾಕ್​ಮೇಲ್​ ಬಲೆಗೆ ಬಿದ್ದಿರುವ ಆ ಖ್ಯಾತ ಗುರೂಜಿ ಯಾರು? ಅವರಿಗೆ ಬೆದರಿಕೆಗಳನ್ನ ಹಾಕುತ್ತಿರುವವರು ಯಾರು..? ಇಡೀ ರಾಜ್ಯವೇ ಬೆಚ್ಚಿ ಬೀಳೋ ಸ್ಟೋರಿಯೇ ಇವತ್ತಿನ ಎಫ್​​​.ಐ.ಆರ್​​. 

ದಿವ್ಯಾ ವಸಂತಾ ಆರೋಪ ನಾವು ಸುಳ್ಳು ಸುದ್ದಿ ಮಾಡುತ್ತಿದ್ದೇವೆ ಅಂತ. ಹಾಗಾದ್ರೆ ಆಕೆಯ ಆರೋಪಕ್ಕೆ ನಾವು ಉತ್ತರ ಕೊಡಲೇಬೇಕಲ್ವಾ..? ಆ ಕೆಲಸವನ್ನ ಬ್ರೇಕ್​ ಆದ್ಮೇಲೆ ಮಾಡ್ತೀವಿ ಅಷ್ಟೇ ಅಲ್ಲ ಸ್ವತಹ ಆನಂದ್​​ ಗುರೂಜಿಯೇ ಈ ಗ್ಯಾಂಗ್​ ಮಾಡಿದ್ದ ಡೀಲ್​ ಕಹನಿಯನ್ನ ಹೇಳಿದ್ದಾರೆ. ಅದೊಂದು ಗ್ಯಾಂಗ್​​​​​ ತನ್ನ ಪಾಡಿಗಿದ್ದ ಗುರೂಜಿಯನ್ನ ಅಡ್ಡಗಟ್ಟಿ ನಿನ್ನ ಸಿಡಿ ನನ್ನ ಬಳಿ ಇದೆ. ಡೀಲ್​ ಮಾಡಿಕೊಂಡ್ರೆ ಆ ವಿಡಿಯೋ ಡಿಲೀಟ್​ ಆಗುತ್ತೆ ಅಂತ ಹೆಳಿದ್ದರಂತೆ. ಅಷ್ಟೇ ಅಲ್ಲ ಗುರೂಜಿಯ ಆಶ್ರಮದ ಜಾಗದ ಬಗ್ಗೆಯೂ ಮಾತನ್ನಾಡಿದ್ರಂತೆ. ಇದೇ ವಿಷಯವನ್ನಿಟ್ಟುಕೊಂಡು ಆ ಗ್ಯಾಂಗ್​ ಯೂಟ್ಯೂಬ್​ ಚಾನಲ್​​​ನಲ್ಲಿ ಗುರೂಜಿ ಬಗ್ಗೆ ಸಾಲು ಸಾಲು ಎಪಿಸೋಡ್​ಗಳನ್ನ ಮಾಡಿದ್ರಂತೆ. 

ದುಡ್ಡಿಗೆ ಬೇಡಿಕೆ ಕೂಡ ಇಟ್ಟಿದ್ರಂತೆ. ಆದ್ರೆ ಯಾವಾಗ ತಮ್ಮ ಬಗ್ಗೆ ವಿಡಿಯೋಗಳು ಹರಿದಾಡೋಕೆ ಶುರುವಾಯ್ತೋ ಗುರೂಜಿ ಸ್ಟೇ ಆರ್ಡರ್​​ ತಂದಿದ್ರು. ಆಗ ಆ ಗ್ಯಾಂಗ್​ ಬೇರೆ ಹೆರುಗಳಲ್ಲಿ ಚಾನಲ್​ ಮಾಡಿಕೊಂಡು ಮತ್ತೆ ಸುದ್ದಿ ಪ್ರಸಾರ ಮಾಡೋದಕ್ಕೆ ಶುರು ಮಾಡಿದ್ರು. ನಿರಂತರವಾದ ಬ್ಲ್ಯಾಕ್​ಮೇಲ್​ ಅನ್ನ ತಡೆದುಕೊಂಡಿದ್ದ ಆನಂದ್​​ ಗುರೂಜಿ ಕೊನೆಗೆ ಪೊಲೀಸ್​ ಠಾಣೆಗೆ ಹೋಗಿ ಕೂತುಬಿಟ್ಟರು. ಎಲುಬಿಲ್ಲದ ನಾಲಗೆ ಏನ್​ ಬೇಕಾದ್ರೂ ಮಾತನ್ನಾಡಿಸುತ್ತೆ ಅನ್ನೋದಕ್ಕೆ ಈಕೆಯ ಈ ಮಾತುಗಳೇ ಸಾಕ್ಷಿ. ಪತ್ರಕರ್ತೆ ಅಂತ ಮುಖವಾಡ ಹಾಕಿಕೊಂಡು ಮಾಡಬಾರದ ಕೆಲಸ ಮಾಡಿ ಈಗ ಪತ್ರಕರ್ತರ ಮೇಲೆಯೇ ಆರೋಪ ಮಾಡುತ್ತಿರುವ ಈಕೆಗೆ ಆ ದೇವರು ಒಳ್ಳೆಯ ಬುದ್ಧಿ ಕರುಣಿಸಲಿ.. ಹಾಗೇ ಈ ಕೇಸ್​​ನಲ್ಲಿ ಯಾರದ್ದು ತಪ್ಪಿದೆ ಅನ್ನೋದು ತನಿಖೆಯಿಂದ ಹೊರಗೆ ಬರಲಿ ಅಂತ ಹೇಳ್ತಾ ಇವತ್ತಿನ ಎಪಿಸೋಡ್​​ ಮುಗಿಸುತ್ತಿದ್ದೇನೆ.

Related Video