ಭಾರತ್ ಬಂದ್ ಎಫೆಕ್ಟ್: ಬೆಳಗಾವಿಯಲ್ಲಿ ವಿದ್ಯಾರ್ಥಿಗಳ ಪರದಾಟ
* ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್
* ಬೆಳಗಾವಿ ಬಸ್ ನಿಲ್ದಾಣದ ಎದುರು ರೈತ ಸಂಘಟನೆ ಪ್ರತಿಭಟನೆ
* ಪರೀಕ್ಷೆ ಇದೆ ಬಸ್ ಬಿಡಿ ಅಂತ ವಿದ್ಯಾರ್ಥಿಗಳ ಮನವಿ
ಬೆಳಗಾವಿ(ಸೆ.27): ಕೇಂದ್ರದ ಕೃಷಿ ಮಸೂದೆಯನ್ನ ವಿರೋಧಿಸಿ ಇಂದು ಭಾರತ್ ಬಂದ್ ನಡೆಯುತ್ತಿದೆ. ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಇದರಿಂದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಪರೀಕ್ಷೆ ಇದೆ ಬಸ್ ಬಿಡಿ ಅಂತ ವಿದ್ಯಾರ್ಥಿಗಳು ವಿನಂತಿಯನ್ನ ಮಾಡಿಕೊಂಡಿದ್ದಾರೆ. ಪ್ರತಿಭಟನೆ ನಡೆಯುತ್ತಿರುವುದರಿಂದ ಬಸ್ ಸಂಚಾರವನ್ನ ನಿಲ್ಲಿಸಲಾಗಿದೆ.
ಭಾರತ್ ಬಂದ್ : ಕಾಂಗ್ರೆಸ್ ಪಕ್ಷ ರೈತರ ಪರವಾಗಿದೆ, ನಮ್ಮ ಬೆಂಬಲವಿದೆ ಎಂದ ಸಿದ್ದರಾಮಯ್ಯ