ಕುಟುಂಬ ನಿರ್ವಹಣೆಗೆ ಕೃಷಿ ಮಾಡಿ ಸೈ, ಓದಿನಲ್ಲೂ ಜೈ ಎನಿಸಿಕೊಂಡ ರಾಯಚೂರಿನ ಯುವತಿ!

ಹೆಣ್ಣು ಮನಸ್ಸು ಮಾಡಿದರೆ, ಕಷ್ಟಕರವಾದ ಸಂದರ್ಭವನ್ನು ಸುಲಬಗೊಳಿಸಬಲ್ಲಳು ಎನ್ನುವುದಕ್ಕೆ ಈ ಯುವತಿಯೇ ಉದಾಹರಣೆ ನೋಡಿ!

Share this Video
  • FB
  • Linkdin
  • Whatsapp

ರಾಯಚೂರು (ಜು. 13): ಹೆಣ್ಣು ಮನಸ್ಸು ಮಾಡಿದರೆ, ಕಷ್ಟಕರವಾದ ಸಂದರ್ಭವನ್ನು ಸುಲಬಗೊಳಿಸಬಲ್ಲಳು ಎನ್ನುವುದಕ್ಕೆ ಈ ಯುವತಿಯೇ ಉದಾಹರಣೆ ನೋಡಿ. ಸಿರಿವಾರ ತಾಲೂಕಿನ ಜಕ್ಕಲದಿಣ್ಣಿ ಗ್ರಾಮದ ಹುಲಿಗೆಮ್ಮ ಯುವತಿ ಡಿಗ್ರಿ ಎರಡನೇ ವರ್ಷ ಓದಬೇಕಿತ್ತು. ತಂದೆ ಅನಾರೋಗ್ಯದಿಂದ ನಿಧನ ಹೊಂದಿದ್ದರಿಂದ ಕುಟುಂಬದ ಜವಾಬ್ದಾರಿ ಹೊರಬೇಕಾಗಿ ಬಂತು. ತಮ್ಮದೇ ಜಮೀನಿನಲ್ಲಿ ಟ್ರಾಕ್ಟರ್ ಓಡಿಸಿ, ಕೃಷಿ ಕೆಲಸ ಮಾಡುತ್ತಾರೆ. ಮನೆಯ ಸಾಲವನ್ನು ತೀರಿಸಿ, ಅಕ್ಕನನ್ನು ಡಿಗ್ರಿ ಓದಿಸುವ ಇಚ್ಚೆಯನ್ನು ಹೊಂದಿದ್ಧಾರೆ. ಕುಟುಂಬವನ್ನು ನಿರ್ವಹಿಸುತ್ತಿದ್ದಾರೆ.ವಿದ್ಯಾಭ್ಯಾಸಕ್ಕೂ ಸೈ, ಕೃಷಿ ಕೆಲಸಕ್ಕೂ ಜೈ ಎನ್ನುವ ಹುಲಿಗೆಮ್ಮನ ಈ ಸಾಧನೆಯನ್ನು ಮೆಚ್ಚಲೇಬೇಕು. 

Related Video