ಕಾಫಿ ತೋಟಕ್ಕೆ ಎಂಟ್ರಿ ಕೊಟ್ಟ 15 ಅಡಿ ಉದ್ದದ ಕಾಳಿಂಗ ಸರ್ಪ: ದಂಗಾದ ಜನ
ಕಾಫಿ ತೋಟದಲ್ಲಿ ಸೆರೆಸಿಕ್ಕ 15 ಅಡಿ ಉದ್ದದ ಕಾಳಿಂಗ ಸರ್ಪ| ಚಿಕ್ಕಮಗಳೂರು ಜಿಲ್ಲೆಯ ಮಹೇಶ್ ಎಂಬುವರ ಕಾಫಿ ತೋಟದಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪ| ಕಾಳಿಂಗ ಸರ್ಪವನ್ನ ಸುರಕ್ಷಿತವಾಗಿ ಹಿಡಿದ ಸ್ನೇಕ್ ಅವರವಿಂದ್|
ಚಿಕ್ಕಮಗಳೂರು(ಫೆ.20): ಜಿಲ್ಲೆಯ ಕಾಫಿ ತೋಟದಲ್ಲಿ ಸುಮಾರು 15 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಇದರಿಂದ ಸುತ್ತಮುತ್ತಲಿನ ಜನತೆ ಕೆಲ ಕ್ಷಣ ಆತಂಕದಲ್ಲಿದ್ದರು. ಮಹೇಶ್ ಎಂಬುವರ ಕಾಫಿ ತೋಟಕ್ಕೆ ಕಾಳಿಂಗ ಸರ್ಪ ಎಂಟ್ರಿ ಕೊಟ್ಟಿತ್ತು.
ಗ್ರಾಮಸ್ಥರೇ ಸೆರೆ ಹಿಡಿದ ಕಾಳಿಂಗ ಸರ್ಪ ಅರಣ್ಯಕ್ಕೆ
ಬಳಿಕ ಸ್ನೇಕ್ ಅವರವಿಂದ್ ಅವರು 15 ಅಡಿ ಉದ್ದ ಕಾಳಿಂಗ ಸರ್ಪವನ್ನ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಕಾಳಿಂಗ ಸೆರೆಯಾಗುತ್ತಿದ್ದಂತೆ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ.