ಜನತಾ ಕರ್ಫ್ಯೂ: ಬೆಳ್ಳಂಬೆಳಗ್ಗೆ ನಡೀತು ಮದುವೆ, ಮನೆಯವ್ರನ್ನು ಬಿಟ್ರೆ ಬೇರ್ಯಾರು ಇಲ್ಲ

ಜನತಾ ಕರ್ಫ್ಯೂ ದಿನ ಮದುವೆಗೂ ಬಿಸಿ ತಟ್ಟಿದೆ. ಪರಿಣಾಮ ಬೆಳಗ್ಗೆ 7 ಗಂಟೆ ಒಳಗೇ ವಿವಾಹ ನೆರವೇರಿಸಲಾಗಿದೆ. ಆರುಮುಗಂ ಹಾಗೂ ಇಂದು ಅವರ ವಿವಾಹ ಬೆಳಗಿನ ಜಾವ ನಡೆದಿದೆ.

First Published Mar 22, 2020, 3:20 PM IST | Last Updated Mar 22, 2020, 3:20 PM IST

ಮೈಸೂರು(ಮಾ.22): ಜನತಾ ಕರ್ಫ್ಯೂ ದಿನ ಮದುವೆಗೂ ಬಿಸಿ ತಟ್ಟಿದೆ. ಪರಿಣಾಮ ಬೆಳಗ್ಗೆ 7 ಗಂಟೆ ಒಳಗೇ ವಿವಾಹ ನೆರವೇರಿಸಲಾಗಿದೆ. ಆರುಮುಗಂ ಹಾಗೂ ಇಂದು ಅವರ ವಿವಾಹ ಬೆಳಗಿನ ಜಾವ ನಡೆದಿದೆ.

12.30ಕ್ಕೆ ವಿವಾಹ ಮುಹೂರ್ತ ನಿಗದಿಯಾಗಿತ್ತು. ಆದರೆ ಜನತಾ ಕರ್ಫ್ಯೂನಿಂದಾಗಿ ಬೇಗ ವಿವಾಹ ಮುಗಿಸಿದ್ದಾರೆ. ಲೀಲಾ ಚೆನ್ನಯ್ಯ ಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನಿಗದಿಯಾಗಿತ್ತು. ಬೆರೆಣಿಕೆಯಷ್ಟೇ ಜನರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತುಂಬಾ ಸರಳವಾಗಿ ಮತ್ತು ಕಡಿಮೆ ಸಮಯದಲ್ಲಿ ವಿವಾಹ ನೆರವೇರಿಸಿದ್ದಾರೆ.

Breaking: ಕರ್ನಾಟಕದ ಈ 6 ಜಿಲ್ಲೆಗಳು ಲಾಕ್‌ಡೌನ್‌ಗೆ ರಾಜ್ಯ ಸರ್ಕಾರ ಆದೇಶ

ವಿವಾಹಕ್ಕಾಗಿ ಮೂರು ತಿಂಗಳ ಹಿಂದೆಯೇ ಕಲ್ಯಾಣ ಮಂಟಪ ಬುಕ್ ಮಾಡಿದ್ದರು. ಆದರೆ ಇಂತಹ ಸ್ಥಿತಿಯಲ್ಲಿ ಸಮಬಂಧಿಕರನ್ನು ಕರೆಯಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡು ಸರಳವಾಗಿ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.