Asianet Suvarna News Asianet Suvarna News

ಬೆಳಗಾವಿ: ಸೋಂಕಿತರ ಶವ ಸುಡೋಕೆ ಸೀಮೆಎಣ್ಣೆ ಸಿಗ್ತಿಲ್ಲ..!

* ಪಿಪಿಇ ಕಿಟ್‌ ಹಾಗೂ ರಬ್ಬರ್‌ ಬಳಸಿ ಸೋಂಕಿತರ ಅಂತ್ಯಕ್ರಿಯೆ
* ಬೆಳಗಾವಿ ನಗರದ ಸದಾಶಿವನಗರದ ಸ್ಮಶಾನದಲ್ಲಿ ಸೀಮೆಎಣ್ಣೆಯ ಅಭಾವ 
* ಒಂದು ಮೃತದೇಹ ಸುಡಲು ಕನಿಷ್ಟ 5 ಲೀಟರ್‌ ಸೀಮೆಎಣ್ಣೆ ಬೇಕು

ಬೆಳಗಾವಿ(ಮೇ.16):  ಕೊರೋನಾ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಸೀಮೆಎಣ್ಣೆ ಸಿಗದ ಪರಿಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ. ಹೀಗಾಗಿ ಪಿಪಿಇ ಕಿಟ್‌ ಹಾಗೂ ರಬ್ಬರ್‌ ಬಳಸಿ ಸೋಂಕಿತರ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ನಗರದ ಸದಾಶಿವನಗರದ ಸ್ಮಶಾನದಲ್ಲಿ ಸೀಮೆಎಣ್ಣೆಯ ಅಭಾವ ಎದುರಾಗಿದೆ. ಈ ಸ್ಮಶಾಶನದಲ್ಲಿ ಪ್ರತಿದಿನ 15 ಕ್ಕೂ ಹೆಚ್ಚು ಜನರ ಅಂತ್ಯಕ್ರಿಯೆ ನಡೆಯುತ್ತಿದೆ. ಒಂದು ಮೃತದೇಹ ಸುಡಲು ಕನಿಷ್ಟ 5 ಲೀಟರ್‌ ಸೀಮೆಎಣ್ಣೆ ಬೇಕು, ಆದರೆ, ಇದೀಗ ಸೀಮೆಎಣ್ಣೆಯ ಅಭಾವ ಎದುರಾಗಿದೆ.

ಕೊರೋನಾ ವಿರುದ್ಧ ಸಮರಕ್ಕೆ ಮತ್ತೊಂದು ಆಯುರ್ವೇದ ಔಷಧ; ವೈರಾನಾರ್ಮ್ ಬಿಡುಗಡೆ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

Video Top Stories