ಕರ್ನಾಟಕ ಪೊಲೀಸರಿಗೆ ಶಿವಸೇನೆ ನಾಯಕನಿಂದ ಸವಾಲ್‌: ಬೆಳಗಾವಿಗೆ ಎಂಟ್ರಿ!?

ಬೆಳಗಾವಿಗೆ ಆಗಮಿಸುತ್ತಿರುವ ರಾಜ್ಯಸಭಾ ಸದಸ್ಯ ಹಾಗೂ ಶಿವಸೇನೆ ವಕ್ತಾರ ಸಂಜಯ್ ರಾವುತ್| ಸದಾ ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಸಂಜಯ್ ರಾವುತ್| ಬೆಳಗಾವಿ ನಗರದಾದ್ಯಂತ ಪೊಲೀಸ್ ಬಿಗಿ ಭದ್ರತೆ| ಸಂಜಯ್ ರಾವುತ್‌ಗೆ ಅನುಮತಿ ನೀಡದ ಪೊಲೀಸರು|

Share this Video
  • FB
  • Linkdin
  • Whatsapp

ಬೆಳಗಾವಿ(ಜ.18): ವಿವಾದಿತ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ರಾಜ್ಯಸಭಾ ಸದಸ್ಯ ಹಾಗೂ ಶಿವಸೇನೆ ವಕ್ತಾರ ಸಂಜಯ್ ರಾವುತ್ ಕರ್ನಾಟಕ ಪೊಲೀಸರಿಗೆ ಸವಾಲ್ ಹಾಕಿ ಇಂದು(ಶನಿವಾರ) ಬೆಳಗಾವಿಗೆ ಆಗಮಿಸುತ್ತಿದ್ದಾರೆ. ನಗರದ ಅತ್ಯಂತ ಹಳೆಯ ಸಾರ್ವಜನಿಕ ಗ್ರಂಥಾಲಯ ವತಿಯಿಂದ ನಡೆಯಲಿರುವ ಬ್ಯಾ.ನಾಥ್ ಪೈ ವ್ಯಾಖ್ಯಾನ ಮಾಲೆ ಕಾರ್ಯಕ್ರಮಕ್ಕೆ ರಾವುತ್ ಆಗಮಿಸುತ್ತಿದ್ದಾರೆ.

ಬೆಳಗಾವಿಗೆ ಎಂಟ್ರಿ ಕೊಟ್ಟ ಮಹಾರಾಷ್ಟ್ರ ಸಚಿವ ರಾಜೇಂದ್ರ ಪಾಟೀಲ ಬಂಧನ

ಪೊಲೀಸರು ಕಾರ್ಯಕ್ರಮಕ್ಕೆ ಮಾತ್ರ ಅನುಮತಿ ನೀಡಿದ್ದಾರೆ. ಆದರೆ ಸಂಜಯ್ ರಾವುತ್‌ಗೆ ಇನ್ನೂ ಪೊಲೀಸರು ಅನುಮತಿ ನೀಡಿಲ್ಲ. ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ನಗರದಾದ್ಯಂತ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಜಯ್ ರಾವುತ್‌ಗೆ ಅನುಮತಿ ನೀಡುತ್ತರೋ ಇಲ್ಲವೋ ಎಂಬ ಕುತೂಹಲ ಮೂಡಿಸಿದೆ.

Related Video