Save Shola : ಶೋಲಾ ಅರಣ್ಯ ರಕ್ಷಣೆಗೆ ಕಾಫಿ ನಾಡಿನ ಜನರ ಆಗ್ರಹ
ಶೋಲಾ ಅರಣ್ಯ ಕಾಣ ಸಿಗುವುದೇ ತುಂಬಾ ವಿರಳ. ಶೋಲಾ ಕಾಡು ವರ್ಷವಿಡಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಮೂಲಕ ವಿಭಿನ್ನವಾಗಿದೆ. ಪಶ್ಚಿಮಘಟ್ಟಗಳ ವ್ಯಾಪ್ತಿಯಲ್ಲಿ ಮಾತ್ರ ಇರುವ ಈ ದಟ್ಟಾರಣ್ಯ ಕಾಫಿನಾಡಲ್ಲಿ ಯಥೇಚ್ಛವಾಗಿದೆ. ಅದು ಜಿಲ್ಲೆಯ ಸಂಪತ್ತು ಕೂಡ. ಇದನ್ನ ಉಳಿಸಿ ಬೆಳೆಸಬೇಕಾಗಿರುವುದು ಜಿಲ್ಲಾಡಳಿತದ ಜೊತೆ ಪ್ರತಿಯೊಬ್ಬ ಕಾಫಿನಾಡಿಗನ ಜವಾಬ್ದಾರಿ. ಇದೀಗ ಈ ನಿಟ್ಟಿನಲ್ಲಿ ಕೂಗು ಕೇಳಿ ಬಂದಿದೆ.
ಚಿಕ್ಕಮಗಳೂರು (ಅ.07): ಶೋಲಾ ಅರಣ್ಯ ಕಾಣ ಸಿಗುವುದೇ ತುಂಬಾ ವಿರಳ. ಶೋಲಾ ಕಾಡು ವರ್ಷವಿಡಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಮೂಲಕ ವಿಭಿನ್ನವಾಗಿದೆ. ಪಶ್ಚಿಮಘಟ್ಟಗಳ ವ್ಯಾಪ್ತಿಯಲ್ಲಿ ಮಾತ್ರ ಇರುವ ಈ ದಟ್ಟಾರಣ್ಯ ಕಾಫಿನಾಡಲ್ಲಿ ಯಥೇಚ್ಛವಾಗಿದೆ. ಅದು ಜಿಲ್ಲೆಯ ಸಂಪತ್ತು ಕೂಡ. ಇದನ್ನ ಉಳಿಸಿ ಬೆಳೆಸಬೇಕಾಗಿರುವುದು ಜಿಲ್ಲಾಡಳಿತದ ಜೊತೆ ಪ್ರತಿಯೊಬ್ಬ ಕಾಫಿನಾಡಿಗನ ಜವಾಬ್ದಾರಿ. ಇದೀಗ ಈ ನಿಟ್ಟಿನಲ್ಲಿ ಕೂಗು ಕೇಳಿ ಬಂದಿದೆ.
ಅಡಿಕೆಗೆ ಎಲೆ ಚುಕ್ಕಿ ರೋಗ, ಇಡೀ ಮರವೇ ನಾಶ, ಆತಂಕದಲ್ಲಿ ಮಲೆನಾಡ ರೈತರು
ಈ ಕಾಡು ಸಸ್ಯಹಾರಿ ಹಾಗೂ ಮಾಂಸಹಾರಿ ಪ್ರಾಣಿಗಳೆರಡಕ್ಕೂ ಕೂಡ ಪ್ರಿಯವಾದ ಕಾಡು. ಇಲ್ಲಿನ ಗಿಡ ಮರಗಳನ್ನ ನಂಬಿ ಸಸ್ಯಹಾರಿಗಳು ಬದುಕ್ತಿದ್ರೆ, ಸಸ್ಯಹಾರಿಗಳನ್ನ ಅವಲಂಬಿಸಿ ಮಾಂಸಹಾರಿಗಳು ಬದುಕ್ತಿವೆ. ಆದರೆ, ಇಂತಹಾ ಕಾಡುಗಳನ್ನ ಯಾರೋ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಕಾಫಿ ಗಿಡ ನೆಡುವ ಸಲುವಾಗಿ ಕಡಿಯುತ್ತಿರುವುದು ನಮ್ಮ ಅಂತ್ಯಕ್ಕೆ ನಾವೇ ಬುನಾದಿ ಹಾಕಿ ಕೊಟ್ಟಂತಾಗುತ್ತಿದೆ. ಹಾಗಾಗಿ, ಸ್ಥಳಿಯರು ಶೋಲಾ ಅರಣ್ಯದ ರಕ್ಷಣೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.