'ಐ ಲವ್ ಯೂ ಪುತ್ತೂರು': ಕಂಬಳದಲ್ಲಿ ಗಮನ ಸೆಳೆದ ಸಾನಿಯಾ ಅಯ್ಯರ್
ಪುತ್ತೂರು ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ನಡೆದ ಕಂಬಳದಲ್ಲಿ ವಿಶೇಷ ಆಹ್ವಾನಿತರಾಗಿದ್ದ ಸಾನಿಯಾ ಅಯ್ಯರ್ ಎಲ್ಲರ ಗಮನ ಸೆಳೆದರು.
ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ನಡೆದ 30ನೇ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ಕೂಟದಲ್ಲಿ ಬಿಗ್ ಬಾಸ್ ಸ್ಪರ್ಧಿ ಸಾನಿಯಾ ಅಯ್ಯರ್ ಭಾಗಿಯಾಗಿದ್ದರು. ಪುತ್ತೂರು ಜನರನ್ನು ಪ್ರೀತಿಯಿಂದಲೇ ‘ಐ ಲವ್ ಯೂ ಪುತ್ತೂರು’ ಎಂದು ಘೋಷಣೆಯೊಂದಿಗೆ ಅವರು ಭಾಷಣ ಮಾಡಿದರು. ನನಗೆ ತುಳು ಭಾಷೆ ಅಂದರೆ ತುಂಬಾ ಇಷ್ಟ, ಕಂಬಳ ಎನ್ನುವುದು ಜೀವನದ ಮೌಲ್ಯವಾಗಿದೆ. ಇಲ್ಲಿನ ಸಂಸ್ಕೃತಿ ಜೀವನ ಪಾಠ ಕಲಿಸಿಕೊಡುತ್ತದೆ ಎಂದರು. ಅವರ ಮಾತಿಗೆ ಫ್ಯಾನ್ಸ್ ಫಿದಾ ಆದರು.