Asianet Suvarna News Asianet Suvarna News

ಬೇಲೂರು ಜಾತ್ರೋತ್ಸವದ ವೇಳೆ ಕುರಾನ್ ಪಠಣ: ಹಿಂದೂ ದೇವರ ಮುಂದೆ ಅಲ್ಲನೇ ಎಲ್ಲಾ ಎಂದರೆ ಒಪ್ಪಿಕೊಳ್ಳೋದು ಹೇಗೆ?

ಬೇಲೂರು ಚನ್ನಕೇಶವ ರಥೋತ್ಸವದ ವೇಳೆ ಖಾಜಿಗಳಿಂದ ಕುರಾನ್ ಪಠಣ ವಿಚಾರಕ್ಕೆ ಸಂಬಂಧಿಸಿದಂತೆ ಚಿಂತಕ ರೋಹಿತ್ ಚಕ್ರ ತೀರ್ಥ ಮಾತನಾಡಿದ್ದು, ಬೇಲೂರು ಚನ್ನಕೇಶವ ದೇವಾಲಕ್ಕೆ 900 ವರ್ಷಗಳ ಇತಿಹಾಸವಿದೆ
ದೇವಸ್ಥಾನದ ರಥೋತ್ಸವ ಸಂದರ್ಭದಲ್ಲಿ ಕುರಾನ್ ಪಠಣ ಸಂಪ್ರದಾಯ ಇಲ್ಲ ಎಂದು ತಿಳಿಸಿದ್ದಾರೆ.
 

ಬೇಲೂರು ಚನ್ನಕೇಶವ ರಥೋತ್ಸವದ ವೇಳೆ ಖಾಜಿಗಳಿಂದ ಕುರಾನ್ ಪಠಣ ವಿಚಾರಕ್ಕೆ ಸಂಬಂಧಿಸಿದಂತೆ ಚಿಂತಕ ರೋಹಿತ್ ಚಕ್ರ ತೀರ್ಥ ಮಾತನಾಡಿದ್ದು, ಬೇಲೂರು ಚನ್ನಕೇಶವ ದೇವಾಲಕ್ಕೆ 900 ವರ್ಷಗಳ ಇತಿಹಾಸವಿದೆ
ದೇವಸ್ಥಾನದ ರಥೋತ್ಸವ ಸಂದರ್ಭದಲ್ಲಿ ಕುರಾನ್ ಪಠಣ ಸಂಪ್ರದಾಯ ಇಲ್ಲ ಎಂದು ತಿಳಿಸಿದ್ದಾರೆ. ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ ಅವರು, ಈ ಸಂಪ್ರದಾಯ ದೇವಾಲಯ ಸ್ಥಾಪನೆಯಾದಗಿಂದಲೂ ಇದ್ದಿದ್ದರೆ ನಮ್ಮ ವಿರೋಧವಿರಲಿಲ್ಲವಾಗಿದ್ದು,ಕಳೆದ 90 ವರ್ಷದ ಹಿಂದೆ  ಕಡತದಲ್ಲಿ ಸೇರಿಸಿದಕ್ಕೆ ಬೆಲೆ ಕೊಡಬೇಕಿಲ್ಲ ಎಂದಿದ್ದಾರೆ. ಅದಲ್ಲದೇ ಚನ್ನಕೇಶವ ರಥೋತ್ಸವಕ್ಕೆ ಬಂದುಕುರಾನ್ ಪಠಣ ಮಾಡೋದು ವಿರೋದವಲ್ಲ, ಆದರೆ
ಹಿಂದೂ ದೇವರ ಮುಂದೆ ಬಂದು ಅಲ್ಲಾನೇ ಎಲ್ಲ, ನಾವು ನಿನ್ನನ್ನು ಬಿಟ್ಟು ಬೇರೆ ಯಾರನ್ನು ಪೂಜಿಸುವುದಿಲ್ಲ ನಾವು ಯಾರನ್ನು ನಂಬುವುದಿಲ್ಲ ಅಂತ ಪಠಣ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ನಾವು ಕೋಮು ಸೌಹಾರ್ದತೆಯಿಂದ ಇರಬೇಕು. ಮುಸ್ಲಿಂ ಸಮುದಾಯದವರು ಕೂಡ  ಅವರ ಆಧಾರದ ಸ್ಥಳಗಳಲ್ಲಿ  ಅರ್ಚಕರನ್ನ ಕರೆದು ಪೂಜೆ ಮಾಡಿಸಲಿ ಎಂದಿದ್ದಾರೆ.ಕೂಡಲೇ ಈ ಸಂಪ್ರದಾಯ ನಿಲ್ಲಿಸಬೇಕು,ಸರ್ಕಾರಕ್ಕೆ ಪತ್ರದ ಮೂಲಕ ಸಂಪ್ರದಾಯವನ್ನ ಬಿಡುವಂತೆ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

Video Top Stories