ಕಾಲು ನೋವಿರುವ ವೃದ್ಧರೇ ಇವರ ಟಾರ್ಗೆಟ್: ನಕಲಿ ಆಯುರ್ವೇದ ಶಾಪ್‌ನಲ್ಲಿ ವಂಚನೆ
ವಿಜಯಪುರದಲ್ಲಿ ಕಾಲು ನೋವು ನಿವಾರಿಸುವ ನೆಪದಲ್ಲಿ ವೃದ್ಧರಿಂದ, ಹಣ ಲೂಟಿ ಮಾಡುವ ಪ್ರಕರಣ ಬೆಳಕಿಗೆ ಬಂದಿದೆ.
ಗುಮ್ಮಟ ನಗರಿಯಲ್ಲಿ ಖತರ್ನಾಕ್ ಗ್ಯಾಂಗ್ ಆಕ್ಟೀವ್ ಆಗಿದ್ದು, ಕಾಲು ನೋವಿನಿಂದ ಕುಂಟುತ್ತಿದ್ದವರನ್ನು ಟಾರ್ಗೆಟ್ ಮಾಡಿ ವಂಚನೆ ಮಾಡಲಾಗುತ್ತಿದೆ. ನಿವೃತ್ತಿಯಾದ ಸರ್ಕಾರಿ ನೌಕರರು, ವಯಸ್ಸಾದ ಶ್ರೀಮಂತರೇ ಮೇಲೆ ಈ ಗ್ಯಾಂಗ್ ಕಣ್ಣು ಇದ್ದು, ವೃದ್ಧರನ್ನು ನಂಬಿಸಿ ನಕಲಿ ಆಯುರ್ವೇದ ಶಾಪ್'ಗೆ ಕರೆದುಕೊಂಡು ಹೋಗಿ ಮೋಸ ಮಾಡಲಾಗುತ್ತದೆ. ಗಿಡಮೂಲಿಕೆಯಿಂದ ಕಾಲುನೋವು ನಿವಾರಣೆ ಎಂದು ಬಣ್ಣದ ಮಾತುಗಳನ್ನಾಡಿ, ನಿವೃತ್ತ ಇಂಜಿನಿಯರ್'ಗೆ ನಾಟಿ ಔಷಧಿ ಕೊಡುವುದಾಗಿ ಮಹಾ ಮೋಸ ಮಾಡಲಾಗಿದೆ. ವಿಜಯಪುರ ನಗರದ ನಿವೃತ್ತ ಇಂಜಿನಿಯರ್ ಭೀಮು ಚೌಹಾಣ್'ಗೆ, ಕೊಬ್ಬರಿ ಎಣ್ಣೆಗೆ ನಕಲಿ ಪೌಡರ್ ಸೇರಿಸಿ ಮೋಸ ಮಾಡಿದ್ದಾರೆ. ನಕಲಿ ಆಯುರ್ವೇದ ವಿಸಿಟಿಂಗ್ ಕಾರ್ಡ್ ಕೊಟ್ಟು, ಸಂತೋಷ ಎನ್ನುವುವವರಿಂದ ಮೋಸ ನಡೆದಿದೆ. ಅಂಗಡಿಗೆ ಬಂದ ಮೇಲೆ 60 ಸಾವಿರ ಡಿಮ್ಯಾಂಡ್ ಮಾಡಿ, 10 ಸಾವಿರ ವಸೂಲಿ ಮಾಡಿ, ಸುಳ್ಳು ಭರವಸೆ ನೀಡಿದ್ದಾರೆ.