ಗ್ರಾಪಂ ಚುನಾವಣೆ ಪ್ರಚಾರಕ್ಕಿಳಿದ 'ಕನ್ನಡತಿ'; ನೆಚ್ಚಿನ ನಟಿಯನ್ನು ನೋಡಲು ಜನವೋ ಜನ..!

ಪುಟ್ಟಗೌರಿ, ಕನ್ನಡತಿ,  ಬಿಗ್ ಬಾಸ್ ಖ್ಯಾತಿಯ ನಟಿ ರಂಜನಿ ರಾಘವನ್ ಗಿರಿಸಾಗರ ಗ್ರಾಮದಲ್ಲಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ರಾಮದಲ್ಲಿ ರೋಡ್ ಶೋ ನಡೆಸಿ ಜೊತೆಗೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದಾರೆ. 

Share this Video
  • FB
  • Linkdin
  • Whatsapp

ಬಾಗಲಕೋಟೆ (ಡಿ. 19): ಗ್ರಾಮ ಪಂಚಾಯತ್ ಚುನಾವಣೆ ರಂಗೇರಿದೆ. ಪ್ರಚಾರದ ಅಬ್ಬರವೂ ಜೋರಾಗಿದೆ. ಆನ್‌ಲೈನ್ ಪ್ರಚಾರವೂ ಜೋರಾಗಿರುವುದನ್ನು ನೋಡಿದ್ದೇವೆ. ಪುಟ್ಟಗೌರಿ,ಬಿಗ್ ಬಾಸ್ ಖ್ಯಾತಿಯ ನಟಿ ರಂಜನಿ ರಾಘವನ್ ಗಿರಿಸಾಗರ ಗ್ರಾಮದಲ್ಲಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ರಾಮದಲ್ಲಿ ರೋಡ್ ಶೋ ನಡೆಸಿ ಜೊತೆಗೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದಾರೆ. 

ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್; ಕಟ್ಟಾ ಹಿಂದುತ್ವವಾದಿ ಟಿಕೆಟ್‌ಗಾಗಿ ಫೈಟ್

ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮ ಪಂಚಾಯಿತಿ ಅಭ್ಯರ್ಥಿಗಳಾದ ವಿಜಯಲಕ್ಷ್ಮಿ ಹೂಗಾರ,ಯಂಕಪ್ಪ ನುಚ್ಚಿನ,ಬಿ ಎನ್ ಮೇತ್ರಿ ಪರ ಪ್ರಚಾರ ನಡೆಸಿದ್ದಾರೆ. ಅಭ್ಯರ್ಥಿಗಳ ಗಳ ಪರ ಪ್ರಚಾರವನ್ನು ಕೇಳಿಸ್ಕೊಂಡ್ರೋ ಇಲ್ವೋ 'ಪುಟ್ಟಗೌರಿ' ನಟಿಯನ್ನು ನೋಡಲು ಜನ ಮಾತ್ರ ಸೇರಿದ್ದರು. 

Related Video