
ಕಲಬುರಗಿ: ಮಹಾಮಳೆಗೆ ಜನಜೀವನ ಅಸ್ತವ್ಯಸ್ತ, ಸೇತುವೆ ಕುಸಿದು, ರಸ್ತೆ ಮುಳುಗಡೆ
ಕಲಬುರಗಿಯಲ್ಲಿ ಅಬ್ಬರಿಸಿದ ಮಳೆರಾಯ| ಜನಜೀವನ ಸಂಪೂರ್ಣ ಅಸ್ತವ್ಯಸ್ತ|ಮಳೆ ನೀರಿನಲ್ಲಿ ಜೆ.ಆರ್.ನಗರ ಜಲಾವೃತ|ಮಳೆ ನೀರಿನಿಂದ ಕೆರೆಗಳಂತಾದ ಹೊಲ, ಗದ್ದೆಗಳು|
ಕಲಬುರಗಿ(ಜೂ.28): ಮಹಾಮಾರಿ ಕೊರೋನಾ ವೈರಸ್ ಹಾವಳಿ ಮಧ್ಯೆ ವರುಣ ಅಬ್ಬರಿಸಿದ್ದಾನೆ. ಹೌದು, ನಿನ್ನೆ ಸುರಿದ ಭಾರೀ ಮಳೆಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮಳೆ ನೀರಿನಲ್ಲಿ ಜೆ.ಆರ್.ನಗರ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬೆಂಗಳೂರಲ್ಲಿ ಹೊಸ ಕೋವಿಡ್ ಕೇಂದ್ರಗಳ ಸ್ಥಾಪನೆ; ಎಲ್ಲೆಲ್ಲಿ? ಇಲ್ಲಿದೆ ನೋಡಿ.!
ಧಾರಾಕಾರವಾಗಿ ಸುರಿದ ಭಾರೀ ಮಳೆಗೆ ಸೇತುವೆ ಕುಸಿದು, ರಸ್ತೆ ಮುಳುಗಡೆಯಾಗಿದೆ. ಇದರಿಂದ ಜನರು ಬಹಳಷ್ಟು ತೊಂದರೆಗಳನ್ನ ಅನುಭವಿಸಿದ್ದಾರೆ. ಮಳೆ ನೀರಿನಿಂದ ಹೊಲ, ಗದ್ದೆಗಳು ಕೆರೆಗಳಂತಾಗಿವೆ. ಇನ್ನು ಮನೆಯಲ್ಲಿದ್ದ ದವಸ, ಧಾನ್ಯ ನೀರು ಪಾಲಾಗಿದೆ.