Asianet Suvarna News Asianet Suvarna News

ರಾಯಚೂರಿನಲ್ಲಿ ಸಂಬಳದ ಹಣ ಖರ್ಚು ಮಾಡಿ 'ಬಿಸಿಯೂಟ' ನಡೆಸುವ ಶಿಕ್ಷಕರು

ರಾಯಚೂರಿನಲ್ಲಿ ಕಳೆದ ನಾಲ್ಕು ತಿಂಗಳಿಂದ ಬಿಸಿಯೂಟಕ್ಕೆ ಬೇಕಾದ ಎಲ್ಲಾ ಸಾಮಾಗ್ರಿಯೂ ಮುಖ್ಯ ಶಿಕ್ಷಕರು ತಮ್ಮ ಸ್ವಂತ ಹಣದಲ್ಲಿ ಖರೀದಿ ಮಾಡುವಂತೆ ಆಗಿದೆ.
 

ಸರ್ಕಾರಿ ಶಾಲೆಯಲ್ಲಿ ನಿತ್ಯವೂ ಮಕ್ಕಳಿಗೆ ಬೆಳಗ್ಗೆ ಹಾಲು ಮತ್ತು ಮಧ್ಯಾಹ್ನ ಬಿಸಿಯೂಟದ ಜೊತೆಗೆ ಮೊಟ್ಟೆ ಮತ್ತು ಬಾಳೆಹಣ್ಣು ನೀಡಲು ಸರ್ಕಾರ ಪ್ಲಾನ್ ಮಾಡಿದೆ. ಅದರಂತೆ ಶಾಲೆಯಲ್ಲಿ ನಿತ್ಯವೂ ಬಿಸಿಯೂಟ ನೀಡಲಾಗುತ್ತಿದೆ. ರಾಯಚೂರು ಜಿಲ್ಲೆಯಲ್ಲಿ 1ರಿಂದ 10ನೇ ತರಗತಿಯಲ್ಲಿ 2,89,287 ಮಕ್ಕಳ ದಾಖಲಾಗಿದ್ದು, ಈ ಮಕ್ಕಳ ಬಿಸಿಯೂಟಕ್ಕಾಗಿ ಸರ್ಕಾರ ಈ ವರ್ಷ 106 ಕೋಟಿ ರೂಪಾಯಿ ಅನುದಾನ ನಿಗದಿ ಮಾಡಿದೆ. ಆದ್ರೆ ಸರ್ಕಾರ ಹಣ ನಿಗದಿ ಮಾಡಿದ್ರೂ ರಾಯಚೂರು ಜಿಲ್ಲಾ ಪಂಚಾಯತ್ ಖಾತೆಗೆ ಮಾತ್ರ ಹಣ ಜಮಾವಾಗಿಲ್ಲ. ಹೀಗಾಗಿ ಕಳೆದ ನಾಲ್ಕು ತಿಂಗಳಿಂದ ಸಾದಿಲ್ವಾರು ಅನುದಾನ ಶಾಲೆಗಳಿಗೆ ಹಂಚಿಕೆ ಮಾಡಲು ಆಗಿಲ್ಲ. ಇದರಿಂದಾಗಿ ಮಕ್ಕಳಿಗೆ ನಿತ್ಯ ಬಿಸಿಯೂಟಕ್ಕೆ ಬೇಕಾದ ಬೆಳೆ, ತರಕಾರಿ, ಎಣ್ಣೆ , ಉಪ್ಪು ಮತ್ತು ಸಾಂಬಾರು ಪದಾರ್ಥಗಳು ತರಲು ನಿತ್ಯವೂ ಮುಖ್ಯ ಶಿಕ್ಷಕರು ಪರದಾಟ ನಡೆಸಿದ್ದಾರೆ. ಹೀಗಾಗಿ ಶಾಲೆಯ ಮುಖ್ಯ ಶಿಕ್ಷಕರು ತಮ್ಮ ಸಂಬಳದ ಹಣವನ್ನು ಖರ್ಚು ಮಾಡಿ ನಿತ್ಯವೂ ಬಿಸಿಯೂಟ ನಡೆಸುತ್ತಿದ್ದಾರೆ.

 

Video Top Stories