ಬೀದಿ ನಾಯಿ ಮೇಲೆ ಹರಿದ ರೆಡ್ ಕಲರ್ ಥಾರ್: ಶ್ವಾನಗಳ ಮೇಲೆ ಕಾರು ಚಾಲಕರ ವಿಕೃತಿ
ಸಹಕಾರ ನಗರದ ಎಫ್ ಬ್ಲಾಕ್ ನ 14ನೇ ಮುಖ್ಯರಸ್ತೆಯ ಫೋಸ್ಟ್ ಆಫೀಸ್ ಬಳಿ ಘಟನೆ ನಡೆದಿದೆ. ರೆಡ್ ಕಲರ್ ಥರ್ ಚಾಲಕನ ವಿಕೃತಿ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. ಜನವರಿ 4ರಂದು ನಡೆದ ಘಟನೆಗೆ ಸ್ಥಳೀಯ ನಿವಾಸಿಗಳು, ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಬೆಂಗಳೂರು(ಜ.15): ನಗರದಲ್ಲಿ ಹೆಚ್ಚಾಯ್ತು ಮೂಕ ಪ್ರಾಣಿಗಳ ಮೇಲಿನ ಕ್ರೌರ್ಯ. ತನ್ನ ಪಾಡಿಗೆ ಇದ್ದ ಬೀದಿ ನಾಯಿಗಳ ಮೇಲೆ ಕಾರು ಚಾಲಕರ ವಿಕೃತಿ; ಜೆಪಿ ನಗರ ಬೆನ್ನಲ್ಲೇ, ಈಗ ಸಹಕಾರ ನಗರದಲ್ಲೂ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ. ಸಹಕಾರ ನಗರದಲ್ಲಿ ಬೀದಿ ನಾಯಿ ಮೇಲೆ ಹರಿದ ರೆಡ್ ಕಲರ್ ಥಾರ್
ಸಹಕಾರ ನಗರದ ಎಫ್ ಬ್ಲಾಕ್ ನ 14ನೇ ಮುಖ್ಯರಸ್ತೆಯ ಫೋಸ್ಟ್ ಆಫೀಸ್ ಬಳಿ ಘಟನೆ ನಡೆದಿದೆ. ರೆಡ್ ಕಲರ್ ಥರ್ ಚಾಲಕನ ವಿಕೃತಿ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. ಜನವರಿ 4ರಂದು ನಡೆದ ಘಟನೆಗೆ ಸ್ಥಳೀಯ ನಿವಾಸಿಗಳು, ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದರು. ನಾಯಿ ಹಾಗೂ ಮರಿ ಅಕ್ಕ-ಪಕ್ಕದ ನಿವಾಸಿಗಳಿಗೆ ಬಹಳ ಹತ್ತಿರವಾಗಿತ್ತು.
ಬಿಎಂಟಿಸಿ ಬಸ್ ಕಂಡಕ್ಟರ್ ಲುಕ್ಕಿಗೆ ಜಾರಿ ಬಿದ್ದ ಯುವತಿ: ಜೀವನದ ಸಾರಥಿಯಾಗ್ತೀನಿ ಎಂದವನ ಬಣ್ಣ ಬಯಲು!
ಏರಿಯಾದ ನಿವಾಸಿಗಳು ನಿತ್ಯ ತಾಯಿ ಹಾಗೂ ಮರಿಗಳಿಗೆ ಊಟ ನೀಡ್ತಿದ್ದರು. ಡಿಸೆಂಬರ್ 4ರ ನಡುರಾತ್ರಿ ರಸ್ತೆಯಲ್ಲಿ ತಮ್ಮ ಪಾಡಿಗೆ ಆಟ ಆಡ್ತಿದ್ದವು. ಆಗ ವೇಗವಾಗಿ ಬಂದ ಥಾರ್ ಚಾಲಕ ಏಕಾಏಕಿ ನಾಯಿಗಳ ಮೇಲೆ ಕಾರು ಹರಿಸಿದ್ದಾನೆ. ಒಂದು ನಾಯಿ ಮರಿ ಕಾರಿನ ಚಕ್ರಕ್ಕೆ ಸಿಕ್ಕು ಸ್ಥಳದಲ್ಲಿ ಒದ್ದಾಡಿ, ನೋವು ತಾಳಲಾರದೆ ನರಳಿ-ನರಳಿ ನಾಯಿ ಮರಿ ಪ್ರಾಣ ಬಿಟ್ಟಿತ್ತು. ನಾಯಿ ಮರಿ ಸಾವನ್ನಪ್ಪಿದ್ದಕ್ಕೆ ಸ್ಥಳೀಯರು ಕಂಬನಿ ಮಿಡಿದಿದ್ದರು.