ಸ್ವಾತಂತ್ರ್ಯೋತ್ಸವದಲ್ಲಿ ಅಪ್ಪು ನೆನಪು: ಪುನೀತ್ ಮುಖವಾಡ ಧರಿಸಿ ಶಾಲಾ ಮಕ್ಕಳ ನೃತ್ಯ
ಸ್ವಾತಂತ್ರ್ಯ ದಿನದಲ್ಲೂ ಪುನೀತ್ ರಾಜ್ ಕುಮಾರ್ ನೆನಪು ಮಾಡಿಕೊಳ್ಳಲಾಗಿದೆ. ಪುನೀತ್ ರಾಜ್ ಕುಮಾರ್ ಮುಖವಾಡ ಧರಿಸಿ ಶಾಲಾ ಮಕ್ಕಳು ನೃತ್ಯ ಮಾಡಿದ್ದಾರೆ.
ಮೈಸೂರು (ಆ.15): 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ನಡುವೆ ಸ್ವಾತಂತ್ರ್ಯ ದಿನದಲ್ಲೂ ಪುನೀತ್ ರಾಜ್ ಕುಮಾರ್ ನೆನಪು ಮಾಡಿಕೊಳ್ಳಲಾಗಿದೆ. ಪುನೀತ್ ರಾಜ್ ಕುಮಾರ್ ಮುಖವಾಡ ಧರಿಸಿ ಶಾಲಾ ಮಕ್ಕಳು ನೃತ್ಯ ಮಾಡಿದ್ದಾರೆ. ಟಿ.ನರಸೀಪುರ ಪಟ್ಟಣ ಸರ್ಕಾರಿ ವಿದ್ಯಾರ್ಥಿನಿಯರ ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆದಿದ್ದು, ಅಪ್ಪು ಮುಖವಾಡ ಧರಿಸಿ ಮಾಡಿದ ನೃತ್ಯಕ್ಕೆ ಪ್ರೇಕ್ಷಕರು ಚಪ್ಪಾಳೆ ಹೊಡೆದಿದ್ದಾರೆ. ಸ್ವಾತಂತ್ರ್ಯ ಸಂದೇಶ ಸಾರುವ ಗೀತೆಗಳಿಗೆ ಶಾಲಾ ಮಕ್ಕಳು ನೃತ್ಯ ಮಾಡಿ ರಂಜಿಸಿದ್ದಾರೆ.