ರಾಯಚೂರು: ಶಾಲೆಗಳು ತೆರೆಯುವಂತೆ ಆಗ್ರಹಿಸಿ ಹೋರಾಟ

ಶಾಲೆಗಳು ಬಂದ್ ಆದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಒಳಗಾದ ಶಿಕ್ಷಣ ಸಂಸ್ಥೆಗಳು| ಖಾಸಗಿ ಶಿಕ್ಷಣ ಸಂಸ್ಥೆ ಉಳಿಗಾಗಿ ಸರ್ಕಾರ ಚಿಂತನೆ ‌ನಡೆಸಬೇಕು| ಶಾಲಾ ವಾಹನಗಳ ಸಾಲದ ಕಂತಿನಲ್ಲಿ ವಿನಾಯಿತಿ ನೀಡಬೇಕು| ಖಾಸಗಿ ಶಾಲಾ ಶಿಕ್ಷಕರಿಗೆ ಮಾಸಿಕ 5-10 ಸಾವಿರ ರೂ. ಸರ್ಕಾರ ನೀಡಬೇಕು| 

First Published Dec 10, 2020, 3:28 PM IST | Last Updated Dec 10, 2020, 3:28 PM IST

ರಾಯಚೂರು(ಡಿ.10): ಪ್ರಮುಖ 11 ಬೇಡಿಕೆಗಳನ್ನ ಇಟ್ಟುಕೊಂಡು ರಾಯಚೂರು, ಮಾನವಿ, ಮಸ್ಕಿ ಹಾಗೂ ಲಿಂಗಸೂಗೂರು ಮತ್ತು ಸಿಂಧನೂರು ಸೇರಿದಂತೆ ಜಿಲ್ಲೆಯ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತಿಭಟನೆ ನಡೆಸಿವೆ. ನಗರದ ಟಿಪ್ಪು ಸುಲ್ತಾನ್ ಗಾರ್ಡನ್‌ನಲ್ಲಿ ಹೋರಾಟ ನಡೆಸಿದ ಖಾಸಗಿ ಶಿಕ್ಷಣ ಸಂಸ್ಥೆಗಳು ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿವೆ. 

ಬೀದಿಯಲ್ಲಿ ನಿಲ್ಲಿಸೋ ಕೆಲಸ ಆಗುತ್ತಿದೆ : ಕೋಡಿಹಳ್ಳಿ ಆಕ್ರೋಶ

ಖಾಸಗಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಮಾಡಲು ಸರ್ಕಾರ ಆದೇಶ ಮಾಡಬೇಕು. ಪೋಷಕರು ಫೀ ಕಟ್ಟುವಂತೆ ಸರ್ಕಾರ ಆದೇಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರ ಬಾಕಿ ಉಳಿಸಿಕೊಂಡ ಆರ್‌ಟಿಇ ಹಣ ಬಿಡುಗಡೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.