ಶಿಕ್ಷಣ ಸಚಿವರೇ.. ಆನ್‌ಲೈನ್ ಶಿಕ್ಷಣ ದುಡ್ಡಿದ್ದವರಿಗೆ ಮಾತ್ರನಾ..?
ಮೊಬೈಲ್ ಕೊಂಡುಕೊಳ್ಳಲು ದುಡ್ಡಿಲ್ಲ. ನಾವು ಹೇಗೆ ಆನ್‌ಲೈನ್ ಶಿಕ್ಷಣ ಪಡೆಯುವುದು ಎಂದು ಹಾವೇರಿ ಜಿಲ್ಲೆಯ ಕೋಡುಬಾಳು ಗ್ರಾಮದ ಮಕ್ಕಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ದುಡ್ಡು ಇಲ್ಲದೇ ಬಡ ವಿದ್ಯಾರ್ಥಿಗಳು ಕೂಲಿ ಕೆಲಸಗಳತ್ತ ಮುಖ ಮಾಡಿದ್ದಾರೆ.
ಹಾವೇರಿ(ಜು.31): ಕೊರೋನಾ ಭೀತಿಯಿಂದಾಗಿ ಶಾಲಾ ಕಾಲೇಜುಗಳು ಬಾಗಿಲು ಮುಚ್ಚಿವೆ. ಹೀಗಾಗಿ ರಾಜ್ಯ ಸರ್ಕಾರ ಆನ್‌ಲೈನ್ ಶಿಕ್ಷಣದ ಮೊರೆ ಹೋಗಿದೆ. ಆದರೆ ಆನ್‌ಲೈನ್ ತರಗತಿಗಳು ದುಡ್ಡಿದ್ದವರಿಗೆ ಮಾತ್ರನಾ ಎನ್ನುವ ಪ್ರಶ್ನೆ ಈಗ ಶುರುವಾಗಿದೆ.
ಹೌದು, ಮೊಬೈಲ್ ಕೊಂಡುಕೊಳ್ಳಲು ದುಡ್ಡಿಲ್ಲ. ನಾವು ಹೇಗೆ ಆನ್‌ಲೈನ್ ಶಿಕ್ಷಣ ಪಡೆಯುವುದು ಎಂದು ಹಾವೇರಿ ಜಿಲ್ಲೆಯ ಕೋಡುಬಾಳು ಗ್ರಾಮದ ಮಕ್ಕಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ದುಡ್ಡು ಇಲ್ಲದೇ ಬಡ ವಿದ್ಯಾರ್ಥಿಗಳು ಕೂಲಿ ಕೆಲಸಗಳತ್ತ ಮುಖ ಮಾಡಿದ್ದಾರೆ.
ಮಕ್ಕಳ ಶಿಕ್ಷಣಕ್ಕಾಗಿ ತಾಳಿ ಅಡವಿಟ್ಟ ತಾಯಿ: ಬಿಎಸ್‌ವೈ ಸರ್ಕಾರದ ವಿರುದ್ಧ ಹೆಚ್‌ಡಿಕೆ ಗರಂ
ಗದಗದಲ್ಲಿ ಓರ್ವ ಮಹಿಳೆಯ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ತಾಳಿಯನ್ನು ಅಡವಿಟ್ಟು ನೆರವಾಗಿದ್ದಾಳೆ. ಇನ್ನು ಹಾವೇರಿ ಮಕ್ಕಳು, ಶಿಕ್ಷಕರು ಫೋನ್‌ನಲ್ಲಿ ಪಾಠ ಮಾಡುತ್ತಾರೆ. ಆದರೆ ನಮಗೆ ಫೋನ್ ಖರೀದಿಸಲು ರೊಕ್ಕ. ಶಾಲೆ ಬಾಗಿಲು ತೆರೆದರೆ ಓದಲು ಹೋಗುತ್ತೇವೆ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ಈ ಮಕ್ಕಳ ಮಾತಿಗೆ ನೀವೇನಂತೀರಾ..?