Asianet Suvarna News Asianet Suvarna News

ಪೊಲೀಸರ ಒಳ್ಳೆ ಕೆಲಸ ನೋಡಿ , ಹಸುಗಳ ಹೊಟ್ಟೆ ತುಂಬಿಸಿದ ಕಲ್ಲಂಗಡಿ

ಮಾರಾಟವಾಗದೇ ಕೂಡಿಟ್ಟ ಕಲ್ಲಂಗಡಿ ಹಣ್ಣು ಬಿಡಾಡಿ ದನಗಳಿಗೆ ತಿನ್ನಿಸಿದ ಪೊಲೀಸರು / ಸೀಲ್ ಡೌನ್ ಹಿನ್ನೆಲೆ ಹಣ್ಣು ಮಾರಾಟ ಮಾಡಲಾಗದೆ ಸ್ಥಳದಲ್ಲಿ ಬಿಟ್ಟು ಹೋಗಿದ್ದ ವ್ಯಾಪಾರಿ/ ಕಲ್ಲಂಗಡಿ ಹಣ್ಣು ಒಡೆದು ಹಸುಗಳಿಗೆ ಹಾಕಿದ  ಕರ್ತವ್ಯ ನಿರತ ಪೊಲೀಸ್ ಪೇದೆಗಳು

Apr 24, 2020, 6:29 PM IST

ವಿಜಯಪುರ(ಏ. 24)  ಮಾರಾಟವಾಗದೇ ಕೂಡಿಟ್ಟ ಕಲ್ಲಂಗಡಿ  ಹಣ್ಣನ್ನು ಪೊಲೀಸರೇ ಮುಂದಾಗಿ ಬಿಡಾಡಿ ದನಗಳಿಗೆ ತಿನ್ನಿಸಿದ್ದಾರೆ.  ಸೀಲ್ ಡೌನ್ ಹಿನ್ನೆಲೆ ಹಣ್ಣು ಮಾರಾಟ ಮಾಡಲಾಗದೆ ವ್ಯಾಪಾರಿ ಅಲ್ಲಿಯೇ ಬಿಟ್ಟು ಹೋಗಿದ್ದರು.

ನಗರದ ಸ್ಟೇಷನ್ ರಸ್ತೆಯ ಪಕ್ಕದಲ್ಲಿದ್ದ ಕಲ್ಲಂಗಡಿ  ಹಣ್ಣುಗಳು ಕೊಳೆತು ಹೋಗುತ್ತವೆ ಎಂಬುದನ್ನು ಅರಿತ ಪೊಲೀಸರು ಹಸುಗಳ ಹೊಟ್ಟೆ ತುಂಬಿಸಿದ್ದಾರೆ.