ದನದ ಹಟ್ಟಿಯಲ್ಲಿ ಬೃಹತ್ ಹೆಬ್ಬಾವುಗಳು: ಹಿಡಿಯೋಕೋದ್ರೆ ಕೈಗೆ ಸುತ್ತಿತು!

ಉಡುಪಿ ಜಿಲ್ಲೆಯ ಕಟಪಾಡಿ ಎಂಬಲ್ಲಿನ ವಿಶ್ವನಾಥ ಕ್ಷೇತ್ರದ ಸಮೀಪದ ರಾಮಚಂದ್ರ ಪೈ ಎಂಬವರ ಮನೆಯ ದನದ ಹಟ್ಟಿಯಲ್ಲಿ 2 ಹೆಬ್ಬಾವುಗಳು ಪತ್ತೆಯಾಗಿವೆ. ಉರಗ ತಜ್ಞ ಹಾವನ್ನು ಹಿಡಿಯಲು ಹೋದಾಗ ಹಾವು ವ್ಯಕ್ತಿಯ ಕೈಗೆ ಸುತ್ತಿಹಾಕಿಕೊಂಡಿದೆ. ಇಲ್ಲಿದೆ ವಿಡಿಯೋ

Share this Video
  • FB
  • Linkdin
  • Whatsapp

ಉಡುಪಿ(ಮೇ 12): ಉಡುಪಿ ಜಿಲ್ಲೆಯ ಕಟಪಾಡಿ ಎಂಬಲ್ಲಿನ ವಿಶ್ವನಾಥ ಕ್ಷೇತ್ರದ ಸಮೀಪದ ರಾಮಚಂದ್ರ ಪೈ ಎಂಬವರ ಮನೆಯ ದನದ ಹಟ್ಟಿಯಲ್ಲಿ 2 ಹೆಬ್ಬಾವುಗಳು ಪತ್ತೆಯಾಗಿವೆ. ಅದನ್ನು ಕಂಡು ಬೆಚ್ಚಿಬಿದ್ದ ಅವರು ಸ್ಥಳೀಯ ಉರಗ ಉರಗತಜ್ಞ ಮನು ಪೈ ಅವರನ್ನು ಕರೆಸಿ ನೋಡಿದಾಗ ಎರಡೂ ಹೆಬ್ಬಾವುಗಳು ಮೊಟ್ಟೆಗೆ ಕಾವು ಕೊಡುತ್ತಿದ್ದುದು ಕಂಡುಬಂತು.

ಎಲ್ಲಿಗೂ ಪ್ರಯಾಣ ಬೆಳೆಸಿಲ್ಲ, ಆದರೂ 81 ಮಂದಿಗೆ ತಗುಲಿದೆ ಕೊರೋನಾ ಸೋಂಕು..!

ಒಂದು ಹೆಬ್ಬಾವು 15 ಮೊಟ್ಟೆಗಳು ಮತ್ತು ಇನ್ನೊಂದು ಹೆಬ್ಬಾವು 16 ಮೊಟ್ಟೆಗಳ ಮೇಲೆ ಸುರಳಿಯಾಗಿ ಕೂತು ಕಾವು ಕೊಡುತ್ತಿದ್ದವು. ನಂತರ ಅವುಗಳನ್ನು ಸುರಕ್ಷಿತವಾಗಿ ಹಿಡಿದ ಉರಗತಜ್ಞ ಮನು ಪೈ ಅವರು ಪ್ರತ್ಯೇಕ ಗೋಣಿ ಚೀಲಕ್ಕೆ ತುಂಬಿಸಿದರು. ಇಲ್ಲಿದೆ ವಿಡಿಯೋ

Related Video