BIG 3: ಈ ಸೇತುವೆಯಲ್ಲಿ ನಡೆದಾಡಲಿಕ್ಕೆ ಗುಂಡಿಗೆ ಬೇಕು: ಅಡಿಕೆ ಮರವೇ ಸೇತುವೆ..!
* ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೋಡು ಗ್ರಾಮದ ಸೇತುವೆ ಕಾಮಗಾರಿ
* ಸರ್ಕಸ್ ಮಾಡಿಕೊಂಡೇ ಶಾಲೆಗೆ ತೆರಳುವ ಮಕ್ಕಳು
* ಅಡಿಕೆ ಮರದ ಆಸರೆಯೆ ಇವರಿಗೆ ಸೇತುವೆ
ಉತ್ತರ ಕನ್ನಡ(ಮೇ.27): ಶಾಲೆಗೆ ತೆರಳುವ ಮಕ್ಕಳು ಸೇರಿದಂತೆ ಎಲ್ಲರೂ ಈ ಸೇತುವೆ ಮೇಲೆ ನಡೆದಾಡೋವಾಗ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತ ಪರಿಸ್ಥಿತಿ ನಿರ್ಮಾಣವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೋಡು ಗ್ರಾಮದಲ್ಲಿ ನಡೆದಿದೆ. ಮಕ್ಕಳಂತೂ ಶಾಲೆಗೆ ತೆರಳಬೇಕಾದರೆ ಸರ್ಕಸ್ ಮಾಡಿಕೊಂಡೇ ಹೋಗುವಂತ ಸ್ಥಿತಿ ನಿರ್ಮಾಣವಾಗಿದೆ. ಅಡಿಕೆ ಮರದ ಆಸರೆಯೆ ಇವರಿಗೆ ಸೇತುವೆಯಾಗಿದೆ. ಹೀಗಾಗಿನ ಅಧಿಖಾರಿಗಳು, ಜನಪ್ರತಿನಿಧಿಗಳಿಗೆ ಇಲ್ಲಿನ ಜನತೆ ಪ್ರತಿ ದಿನ ಹಿಡಿಶಾಪ ಹಾಕಿಕೊಂಡೇ ಓಡಾಡುತ್ತಿದ್ದಾರೆ. ಸ್ವಲ್ಪ ಯಾಮಾರಿದ್ರೂ ಜನರ ಜೀವಕ್ಕೆ ಅಪಾಯವಾಗುತ್ತೆ.
ಬೈಕ್‌ಗಿಂತ ಬಿಎಂಟಿಸಿ ಬಸ್ ಅಗ್ಗ: ಪ್ರಯಾಣಿಕರ ಸುರಕ್ಷತೆಯೊಂದಿಗೆ ರಾಜಿ?