Asianet Suvarna News Asianet Suvarna News

ಸಾರಿಗೆ ಮುಷ್ಕರ: ಖಾಸಗಿ ಬಸ್‌ ಮಾಲೀಕರ ಅಂಧಾ ದರ್ಬಾರ್‌, ಕಂಗಾಲಾದ ಪ್ರಯಾಣಿಕರು..!

ಮುಷ್ಕರವನ್ನೇ ಲಾಭಕ್ಕೆ ಬಳಸಿಕೊಂಡ ಖಾಸಗಿ ಬಸ್‌ ಮಾಲೀಕರು| ಸಾಮಾನ್ಯವಾಗಿ ಬೆಂಗಳೂರಿನಿಂದ ಬಳ್ಳಾರಿಗೆ 500 ರೂ.| ಖಾಸಗಿ ಬಸ್‌ ಮಾಲೀಕರಿಂದ 1500 ರಿಂದ 2000 ರೂ. ವಸೂಲಿ| 

ಬಳ್ಳಾರಿ(ಏ.09): ಖಾಸಗಿ ಬಸ್‌ನವರು ಹೊಸಪೇಟೆ ಅಂತ ಹತ್ತಿಸಿಕೊಂಡು ಬಳ್ಳಾರಿಗೆ ಕರೆದೊಯ್ದ ಘಟನೆ ನಗರ ಇಂದು(ಶುಕ್ರವಾರ) ನಡೆದಿದೆ. ಖಾಸಗಿ ಬಸ್‌ನವರು ಮುಷ್ಕರವನ್ನೇ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ. ಕೆಲಸ ಬಸ್‌ ಮಾಲೀಕರು ನೇರವಾಗಿ ವಸೂಲಿ ದಂಧೆಗೆ ಇಳಿದಿದ್ದಾರೆ. ಹೀಗಾಗಿ ಪ್ರಯಾಣಿಕರು ಸಂಕಷ್ಟಗಳನ್ನ ಎದುರಿಸುವಂತಾಗಿದೆ. 

8 ನಗರಗಳಲ್ಲಿ ಕೊರೊನಾ ಕರ್ಫ್ಯೂ; ಅಗತ್ಯವಸ್ತುಗಳು, ಮೆಡಿಕಲ್ ಸೇವೆಗೆ ಅಡ್ಡಿಯಿಲ್ಲ..!

ಸಾಮಾನ್ಯವಾಗಿ ಬೆಂಗಳೂರಿನಿಂದ ಬಳ್ಳಾರಿಗೆ 500 ರೂ. ಪ್ರಯಾಣ ದರ ಇದೆ. ಆದರೆ, ಖಾಸಗಿ ಬಸ್‌ ಮಾಲೀಕರು ಮಾತ್ರ 1500 ರಿಂದ 2000 ರೂ. ವಸೂಲಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
 

Video Top Stories