ಗ್ರೀನ್‌ ಝೋನ್‌ನಲ್ಲಿದ್ದ ಚಾಮರಾಜನಗರ ಜಿಲ್ಲೆಗೆ ಕೊರೋನಾ ಟೆನ್ಷನ್‌..!

ಸೋಂಕಿತ ಪೊಲೀಸ್‌ ಪೇದೆಯಿಂದ ಚಾಮರಾಜನಗರ ಜಿಲ್ಲಾದ್ಯಂತ ಆತಂಕ| ಪೇದೆ ಸಂಪರ್ಕದಲ್ಲಿದವರ ಪರೀಕ್ಷಾ ವರದಿ ಮೇಲೆ ಇದೀಗ ಎಲ್ಲರ ಕಣ್ಣು ನೆಟ್ಟಿದೆ| ಇಂದು 18 ಜನರ ವೈದ್ಯಕೀಯ ವರದಿಗಳು ಬರುವ ನಿರೀಕ್ಷೆ|

First Published May 6, 2020, 2:44 PM IST | Last Updated May 6, 2020, 2:44 PM IST

ಚಾಮರಾಜನಗರ(ಮೇ.06): ಗ್ರೀನ್‌ ಝೋನ್‌ನಲ್ಲಿದ್ದ ಚಾಮರಾಜನಗರ ಜಿಲ್ಲೆಗೆ ಕೊರೋನಾ ಆತಂಕ ಶುರುವಾಗಿದೆ. ಹೌದು, ಕೋವಿಡ್‌ ಸೋಂಕಿತ ಪೊಲೀಸ್‌ ಪೇದೆಯಿಂದ ಜಿಲ್ಲಾದ್ಯಂತ ಟೆನ್ಷನ್‌ ಆರಂಭವಾಗಿದೆ. ಪೇದೆ ಸಂಪರ್ಕದಲ್ಲಿದವರ ಪರೀಕ್ಷಾ ವರದಿ ಮೇಲೆ ಇದೀಗ ಎಲ್ಲರ ಕಣ್ಣು ನೆಟ್ಟಿದೆ. 

ವಿಜಯಪುರದಲ್ಲಿ ಮಹಾಮಾರಿ ಕೊರೋನಾ ವೈರಸ್‌ ಬಗ್ಗುಬಡಿದ ಹಸುಗೂಸು..!

ಇಂದು(ಬುಧವಾರ) 18 ಜನರ ವೈದ್ಯಕೀಯ ವರದಿಗಳು ಬರುವ ನಿರೀಕ್ಷೆ ಇದೆ. ಸೋಂಕಿತ ಪೇದೆ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 24 ಜನರಿಗೆ ಕ್ವಾರಂಟೈನ್‌ ಮಾಡಲಾಗಿದೆ. ಮೂವರು ವೃದ್ಧರು,ನಾಲ್ವರು ಮಕ್ಕಳ ಮೇಲೆ ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ತೀವ್ರ ನಿಗಾ ಇಡಲಾಗಿದೆ.