ಮೀಸಲಾತಿ ಘೋಷಿಸದಿದ್ರೆ ಬೃಹತ್ ಪ್ರತಿಭಟನೆ: ಸರ್ಕಾರಕ್ಕೆ ಪಂಚಮಸಾಲಿ ಹೋರಾಟಗಾರರ ಎಚ್ಚರಿಕೆ

ಪಂಚಮಸಾಲಿ ಹೋರಾಟಗಾರರು 2-ಎ ಮೀಸಲಾತಿಗಾಗಿ, ಚಳಿಗಾಲದ ಅಧಿವೇಶನದಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ಲಾನ್‌ ಮಾಡಿದ್ದಾರೆ.
 

Share this Video
  • FB
  • Linkdin
  • Whatsapp

ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪಂಚಮಸಾಲಿ ಹೋರಾಟಗಾರರಿಂದ ಸಿದ್ಧತೆ ನಡೆಸಿದ್ದಾರೆ. ಬೆಳಗಾವಿ ಅಧಿವೇಶನದ ವೇಳೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಡಿಸೆಂಬರ್ 19ರಿಂದ ಬೆಳಗಾವಿ ಚಳಿಗಾಲ ಅಧಿವೇಶನ ಆರಂಭವಾಗಲಿದ್ದು, ಮೀಸಲಾತಿ ಘೋಷಿಸದಿದ್ರೆ ಡಿ. 22ರಂದು ವಿರಾಟ್‌ ಪಂಚಶಕ್ತಿ ಸಮಾವೇಶದ ಮೂಲಕ 25 ಲಕ್ಷ ಜನರನ್ನು ಸೇರಿಸಿ ಬೃಹತ್‌ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ. ಸುವರ್ಣ ಸೌಧದ ಬಳಿ ಪಂಚಮಸಾಲಿ ಸಮಾವೇಶಕ್ಕೆ ಸಿದ್ಧತೆ ನಡೆದಿದ್ದು, ಮೀಸಲಾತಿ ನೀಡದಿದ್ದರೆ ಅಂತಿಮ ಹಂತದ ಹೋರಾಟದ ಎಚ್ಚರಿಕೆ ನೀಡಲಾಗಿದೆ.

Related Video